ಚಾಗಭಾವಿ ಕ್ಯಾಂಪ್‌ನಲ್ಲಿ ಶಾಲಾ ಸಂಸತ್ತು ರಚನೆ

ಸಿರವಾರ,ಜೂ.೧೧-
ತಾಲೂಕಿನ ಚಾಗಭಾವಿ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನದ ಮೂಲಕ ಮಕ್ಕಳ ಶಾಲಾ ಸಂಸತ್ತನ್ನು ಶನಿವಾರ ರಚನೆ ಮಾಡಲಾಯಿತು.
ಭಾರತದ ಚುನಾವಣಾ ಆಯೋಗ ನಡೆಸುವ ಸಾರ್ವತ್ರಿಕ ಚುನಾವಣೆಗಳು ಹಾಗೂ ಮತದಾನದ ಎಲ್ಲ ವಿಧಾನಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು. ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ, ಸಂಸದೀಯ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ನೀಡಲು ಶಾಲಾ ಸಂಸತ್ತನ್ನು ರಚಿಸಲಾಗುತ್ತದೆ ಎಂದು ಮುಖ್ಯ ಶಿಕ್ಷಕ ಬಲವಂತ ಮಹೇಂದ್ರಕರ್ ಹೇಳಿದರು.
ನಾಗರಾಜ(ಮುಖ್ಯಮಂತ್ರಿ), ಶ್ರೀದೇವಿ(ಉಪಮುಖ್ಯಮಂತ್ರಿ), ಲಕ್ಷ್ಮಿ (ಶಿಕ್ಷಣ) , ಮಾದೇಶ(ಆಹಾರ), ಭೂಮಿಕಾ (ಆರೋಗ್ಯ), ಮಲ್ಲಯ್ಯ(ನೀರಾವರಿ), ವಂದನಾ(ಹಣಕಾಸು), ರಾಧಿಕಾ (ತೋಟಗಾರಿಕೆ), ಲಾಲುಸಾಬ್ (ಸ್ವಚ್ಛತಾ), ಜ್ಯೋತಿಕಾ(ಶಿಸ್ತು ಪರಿಪಾಲನೆ), ಮಹೇಶ(ಪ್ರವಾಸ), ದೀಪಿಕಾ(ಸಾಂಸ್ಕೃತಿಕ), ಮಂತ್ರಿಗಳಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಶಿಕ್ಷಕಿ ಅನ್ನಪೂರ್ಣಮ್ಮ, ಮಂಜುಳಾ ದೇವಿ, ಬಸಮ್ಮ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಸೇರಿದಂತೆ ಶಾಲಾ ಮಕ್ಕಳು ಇದ್ದರು.