ಚಾಕು ತೋರಿಸಿ ಬೆದರಿಸಿ ಸುಲಿಗೆ ಮೂವರು ಸೆರೆ

crimephoto from Keshav

ಬೆಂಗಳೂರು, ನ.೧೨-ಒಂಟಿಯಾಗಿ ಓಡಾಡುವವರನ್ನು ಹಿಂಬಾಲಿಸಿ ಚಾಕು ತೋರಿಸಿ ಬೆದರಿಸಿ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಮೂವರು ಸುಲಿಗೆ ಕೋರರನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ೨.೫ ಲಕ್ಷ ಮೌಲ್ಯದ ಮಾಲು ಗಳನ್ನು ವಶಪಡಿಸಿಕೊಂಡಿದ್ದಾರೆ.
ನಾರಾಯಣಪುರದ ವಿಷ್ಣು (೨೧)ಶಿವಕುಮಾರ್ (೨೨) ಹಾಗೂ ಹೆಣ್ಣೂರಿನ ಸಂತಮಿಲ್ (೨೨)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ೨.೫
ಲಕ್ಷ ರೂ ಮೌಲ್ಯದ ೪೦ ಮೊಬೈಲ್ ಗಳು ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಂಟಿಯಾಗಿ ಓಡಾಡುವವರನ್ನು ಹಿಂಬಾಲಿಸಿ ಚಾಕು ತೋರಿಸಿ ಬೆದರಿಸಿ ಮೊಬೈಲ್ ದೋಚಿದ್ದ ಪ್ರಕರಣ ದಾಖಲಿಸಿಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಆರೋಪಿಗಳ ಬಂಧನದಿಂದ ೪ ರಾಬರಿ ಪ್ರಕರಗಳು ಪತ್ತೆಯಾಗಿದೆ.