ಚಾಕು ತೋರಿಸಿ ಚಿನ್ನಾಭರಣ ಲೂಟಿ

ಹುಮನಾಬಾದ್: ಜು.20:ಹಾಡುಹಗಲೇ ಮನೆಯವರು ಕೆಲಸದಲ್ಲಿ ತೊಡಗಿದ್ದಾಗ ಮನೆಗೆ ನುಗ್ಗಿದ ದರೋಡೆ ಕೋರರು ಚಾಕು ತೋರಿಸಿ ಲಕ್ಷಾಂತರ ರು . ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ದ್ವಿಚಕ್ರ ವಾಹನದ ಮೇಲೆ ಪರಾರಿಯಾದ ಘಟನೆ ಪಟ್ಟಣದ ಕಲ್ಲೂರ ಬೈಪಾಸ್ ಹತ್ತಿರ ಮಂಗಳವಾರ ಮಧ್ಯಾಹ್ನ ಜರುಗಿದೆ . ಪಟ್ಟಣದ ಕಲ್ಲೂರ ` ಬೈಪಾಸ್‍ದಲ್ಲಿರುವ ಜೆಸ್ಕಾಂ ಸಹಾಯಕ ಎಂಜಿನಿಯರ್ ಅರವಿಂದ ಧುಮಾಳ ಅವರ ಮನೆ ಮುಂಭಾಗದ ಬಾಗಿಲಿ ನಿಂದ ಒಳಗೆ ನುಗ್ಗಿದ ದರೋಡೆಕೋರರು ತಾಯಿ ಹಾಗೂ ಹೆಂಡತಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಚಿನ್ನಾಭರಣ ದೋಚಿದ್ದಾರೆ .
ಕೊರಳಲ್ಲಿದ್ದಸರಹಾಗೂ ಕೈಯಲ್ಲಿನ ಚಿನ್ನದ ಬಳೆಸೇರಿ 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಸುಮಾರು ಹತ್ತು ತೊಲೆಗೂ ಅಧಿಕ ಚಿನ್ನಾಭರಣ ದೋಚಿ ಕೊಂಡು ಪರಾರಿಯಾಗಿದ್ದಾರೆ ಎಂದು ಕುಟುಂ ಬಸ್ಥರು ಮಾಹಿತಿ ನೀಡಿದ್ದಾರೆ . ದರೋಡೆಕೋರರುಮೊದಲುಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಬಾಯಿ ಒತ್ತಿ ಹಿಡಿದು ಮನೆಯೊಳಗೆ ನುಗ್ಗಿದ್ದಾರೆ . ಬಳಿಕ ಮನೆಯಲ್ಲಿರುವ ಮಹಿಳೆಯರಿಗೆ ಚಾಕು ತೋರಿಸುವ ಮೂಲಕ ಕೊರಳಲ್ಲಿ ಕೈಯಲ್ಲಿದ್ದ ಚಿನ್ನಾಭರಣಲೂಟಿಮಾಡಿದ್ದಾರೆ.ತಮ್ಮೊಂದಿಗೆ ತಂದ ಕೆಲ ಮಾರಕಾಸ್ತ್ರ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಅಪರಾಧವಿಭಾಗ ದ ಪೆÇಲೀಸ್ ಅಧಿಕಾರಿಗಳು ಭೇಟಿ , ನೀಡಿ ಪರಿಶೀಲಿಸಿ ತನಿಖೆ ನಡೆಸಿದ್ದಾರೆ .