ಚಾಕು ಇರಿದು ವ್ಯಕ್ತಿಯ ಕೊಲೆ

ನಂಜನಗೂಡು: ಆ.2- ತಾಲ್ಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಮಹದೇವ (44) ಕೊಲೆಯಾದ ವ್ಯಕ್ತಿ. ಗಲಾಟೆ ವೇಳೆ ತಡೆಯಲು ಹೋಗಿದ್ದ ಇಬ್ಬರು ಸ್ನೇಹಿತರಿಗೂ ಗಂಭೀರ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ನಂಜುಂಡ, ಮಹಾದೇವಸ್ವಾಮಿ, ಸೋಮು ಎಂಬವರ ವಿರುದ್ಧ ಆರೋಪ ಮಾಡಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.