ಚಾಕು ಇರಿದು ಟ್ಯಾಕ್ಸಿಚಾಲಕನ ಕೊಲೆ

ಕಲಬುರಗಿ ಏ 21: ನಗರದ ರಿಂಗ್ ರಸ್ತೆ,ಹೊಟೇಲೊಂದರ ಬಳಿ ಟ್ಯಾಕ್ಸಿ ಚಾಲಕನೊಬ್ಬನ ಮೇಲೆ ನಾಲ್ಕೈದು ಜನ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಕೊಲೆಯಾದ ಟ್ಯಾಕ್ಸಿಚಾಲಕನನ್ನು ಕಲಬುರಗಿಯ ಮಿಲ್ಲತ್ ನಗರದ ನಿವಾಸಿ ಜಿಶಾನ್ ಮಹ್ಮದ್ ಉಸ್ಮಾನ್ (25) ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ರಿಂಗ್ ರಸ್ತೆಯಲ್ಲಿನ ಸನಾ ಹೊಟೇಲ್ ಬಳಿ ನಾಲ್ಕೈದು ಜನ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದರು. ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ಟ್ಯಾಕ್ಸಿಚಾಲಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು .ಚಿಕಿತ್ಸೆ ಫಲಕಾರಿಯಾಗದೇ ಈತನ ಸಾವು ಸಂಭವಿಸಿದೆ.
ಕೊಲೆಗೆ ಕಾರಣ ಏನು ? ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.