ಚಾಕುವಿನಿಂದ ಚುಚ್ಚಿ ಮಹಿಳೆ ಕೊಲೆ 24ತಾಸಿನಲ್ಲೇ ಇಬ್ಬರು ಆರೋಪಿಗಳು ಆರೆಸ್ಟ್.

ಕೂಡ್ಲಿಗಿ. ಮಾ.31 :- ಗಂಡ -ಹೆಂಡತಿ ಪರಸ್ಪರ ಹೊಂದಾಣಿಕೆ ಜೀವನ ನಡೆಸಿಕೊಂಡು ಹೋಗುವುದಾಗಿ ಕೋರ್ಟ್ ನಲ್ಲಿ ಹೇಳಿಕೆ ನೀಡಿ ಬೈಕ್ ನಲ್ಲಿ ಪತಿ ಪತ್ನಿ ಇಬ್ಬರು  ಸ್ವಗ್ರಾಮ ನಿಂಬಳಗೆರೆಗೆ ಹೋಗುವ ಮಾರ್ಗದಲ್ಲಿ ಸೂಲದಹಳ್ಳಿ ದಾಟಿದ ನಂತರ ನಿಂಬಳಗೆರೆ ಅರಣ್ಯ ಪ್ರದೇಶದಲ್ಲಿ ಬೈಕ್ ನ್ನು ಅಡ್ಡಗಟ್ಟಿದ ಇಬ್ಬರು ಪತ್ನಿಯನ್ನು  ಚಾಕುವಿನಿಂದ ದೇಹದ ಭಾಗಗಳಿಗೆ ಚುಚ್ಚಿ ಚುಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಶನಿವಾರ ಸಂಜೆ 4-10ಗಂಟೆಗೆ ಜರುಗಿದೆ.
ಫಾತಿಮಾ (35) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾಳೆ. ಈಕೆಯು ತನ್ನ ಗಂಡನೊಂದಿಗೆ ಕೋರ್ಟ್ನಲ್ಲಿ ಗಂಡ ಹೆಂಡತಿ ನಡುವಿನ ವೈಮನಸ್ಸಿನ ಪ್ರಕರಣದಲ್ಲಿ ಇದ್ದ ವಿಚಾರಣೆಯಲ್ಲಿ ಹೊಂದಾಣಿಕೆ ಜೀವನ ಮಾಡಿಕೊಂಡು ಹೋಗುವ ಬಗ್ಗೆ ರಾಜಿ ಹೇಳಿಕೆ ನೀಡಿ ಸ್ವಗ್ರಾಮಕ್ಕೆ ಪತಿ ಇಬ್ರಾಹಿಂ ಜೊತೆ  ಪತ್ನಿ ಫಾತಿಮಾ ಹೋಗುತ್ತಿರುವಾಗ್ಗೆ  ಬೈಕಿನಲ್ಲಿ ಸೂಲದಹಳ್ಳಿ ದಾಟಿದ ನಂತರ ಬರುವ  ನಿಂಬಳಗೆರೆಯ ಅರಣ್ಯ ಪ್ರದೇಶದ ಸೂಲದಹಳ್ಳಿ-ನಿಂಬಳಗೇರೆ ರಸ್ತೆಯಲ್ಲಿ  ನಿಂಬಳಗೆರೆ ಗ್ರಾಮದ ಇರ್ಫಾನ್ ಹಾಗೂ ಆನಂದ್ ಎಂಬುವವರು ವಾಹನ ಅಡ್ಡಗಟ್ಟಿ   ಇರ್ಫಾನ್ ಎಂಬುವಾತ ನೀ‌ನು ನಿನ್ನ ಗಂಡನೊಂದಿಗೆ ರಾಜಿಯಾಗಿದ್ದಿಯ ಎಂದು
ಅವರ ಕೈಯಲ್ಲಿದ್ದ ಚಾಕುವಿನಿಂದ ಇರಿದು  ಫಾತಿಮಾಳ ಮೇಲೆ ಹಲ್ಲೆ  ನಡೆಸಿ ಬೈಕಿಂದ ಆಕೆ ರಸ್ತೆಗೆ ಬಿದ್ದ ನಂತರ ಅವರಿಂದ ಪತಿ ತಪ್ಪಿಸಿಕೊಂಡು ಹೋಗಿ ನಿಂಬಳಗೆರೆ ಗ್ರಾಮದ ಸಂಬಂಧಿಕರಿಗೆ, ಜನರಿಗೆ ವಿಷಯ ತಿಳಿಸಿ ಅವರೊಂದಿಗೆ ಹಲ್ಲೆ ನಡೆದ ಸ್ಥಳಕ್ಕೆ ಬಂದು ನೋಡಲಾಗಿ ಫಾತಿಮಾಳು ಚಾಕುವಿನಿಂದ ದೇಹದ ಭಾಗಗಳಿಗೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಕೊಲೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಕೊಲೆಯಾದ ಮಹಿಳೆಯ ಪತಿ ಇಬ್ರಾಹಿಂ ನೀಡಿದ ದೂರಿನಂತೆ ಶನಿವಾರ ರಾತ್ರಿ ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ ಎಲ್  ಶ್ರೀಹರಿ ಬಾಬು, ಕೂಡ್ಲಿಗಿ  ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು  ಸಿಪಿಐ ವೆಂಕಟಸ್ವಾಮಿ ಹಾಗೂ ಕಾನಾಹೊಸಹಳ್ಳಿ ಪಿಎಸ್ಐ ಎರಿಯಪ್ಪ ಅಂಗಡಿ  ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ  ತನಿಖೆ ಕೈಗೊಂಡಿದ್ದು ಇಂದು ಆರೋಪಿಗಳನ್ನು ಘಟನೆ ನಡೆದು 24ತಾಸಿನ ಒಳಗಾಗಿ ಇಬ್ಬರು ಆರೋಪಿಗಳಾದ ಇರ್ಫಾನ್ ಹಾಗೂ ಆನಂದ ಎಂಬುವವರನ್ನು ಕಾನಾಹೊಸಹಳ್ಳಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.