ಚಾಕುವಿನಿಂದ ಕೊಲೆಯತ್ನ – ಆರೋಪಿ ಬಂಧನ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 28 :-  ಎದುರಿಗೆ ಬಂದನೆಂದು  ಓರ್ವ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಕ್ಕೆ ಯಾಕೆ ಬೈಯುತ್ತಿ ಎಂದು  ಆ ವ್ಯಕ್ತಿ ಕೇಳಿದ್ದರಿಂದ   ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ಕೂಡ್ಲಿಗಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರ 6-50ಗಂಟೆಗೆ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದ ರಸ್ತೆಯಲ್ಲಿ  ಜರುಗಿದೆ. ಪಟ್ಟಣದ ಎಂ. ಶ್ರೀನಿವಾಸ (42) ಚಾಕುವಿನಿಂದ ಗಾಯಗೊಂಡ ವ್ಯಕ್ತಿಯಾಗಿದ್ದು ಭರತ್ (36) ಚಾಕುವಿನಿಂದ ಕೊಲೆಯತ್ನ ನಡೆಸಿದ ಆರೋಪಿಯಾಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.    ಶ್ರೀ ವೆಂಕಟೇಶ್ವರ ದೇವಸ್ಥಾನ ಸಮೀಪದ ಶ್ರೀ ವೈಷ್ಣವಿ ಬ್ಯುಟಿ ಪಾರ್ಲರ್ ಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿ ನಿಂತಿದ್ದ ಭರತ್ ಎಂಬಾತನು ನನ್ನನ್ನು ತಡೆದು ನಿಲ್ಲಿಸಿ ನನ್ನ ಎದುರಿಗೆ ಬರುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಯಾಕೆ ಬಯ್ಯುತ್ತಿ ಅಂತ ವ್ಯಕ್ತಿ ಕೇಳಿದ್ದಕ್ಕೆ ನನ್ನನ್ನೇ ಪ್ರಶ್ನೆಮಾಡುತ್ತೀಯ ಅಂತ ಹೇಳಿ ಕೊಲೆ ಮಾಡುವ ಉದ್ದೇಶದಿಂದ ಚಾಕು ಹಿಡಿದು ಕುತ್ತಿಗೆಗೆ ಹೊಡೆಯಲು ಬಂದಾಗ ಕೊಸರಿಕೊಂಡಿದ್ದರಿಂದ ಪ್ರಾಣ ಉಳಿಯಿತು ಅಲ್ಲದೆ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಗೀರುಬಿದ್ದು ಗಾಯವಾಗಿದ್ದು ಅಷ್ಟರಲ್ಲಿ ಅಲ್ಲೇ ಇದ್ದ ಕೆಲವರು ಆರೋಪಿ ಭರತನನ್ನು ನೂಕಿದರು ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಕೂಡ್ಲಿಗಿ ಪೊಲೀಸ ಠಾಣೆಗೆ ಬಂದು ಗಾಯಾಳು ಎಂ. ಶ್ರೀನಿವಾಸ ನೀಡಿದ ದೂರಿನಂತೆ ಕೂಡ್ಲಿಗಿ ಅಪರಾಧ ವಿಭಾಗದ ಪಿಎಸ್ಐ ಮಾಲಿಕ್ ಸಾಬ್ ಕಿಲಾರಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಭರತ್ ನನ್ನು ಬಂಧಿಸಿದ್ದಾರೆಂದು ತಿಳಿದಿದೆ.