ಚಾಕುವಿನಿಂದ ಇರಿದು ಯುವಕನ‌ ಕೊಲೆ

ಬೆಂಗಳೂರು, ಏ.16- ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನನ್ನು ಆತನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಕೆ.ಜಿ.ಹಳ್ಳಿಯಲ್ಲಿ ನಡೆದಿದೆ.
ವೆಂಕಟೇಶ್ವರ ಲೇಔಟ್ ನಿವಾಸಿ ಫರಾನ್ (26) ಕೊಲೆಯಾದ ಯುವಕ. ಚಿಕನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪರಾನ್ ನಿನ್ನೆ ರಾತ್ರಿ 10 ಗಂಟೆಯ ಸಮಯದಲ್ಲಿ ಕ್ಷುಲ್ಲಕ ವಿಚಾರವಾಗಿ ಸ್ನೇಹಿತನ ಜತೆ ಜಗಳವಾಗಿದೆ.
ಆ ಸಂದರ್ಭದಲ್ಲಿ ಫರಾನ್ ಬೈದಿದ್ದಾನೆ. ಇದೇ ಕೋಪಕ್ಕೆ ಆರೋಪಿ ಚಾಕುವಿನಿಂದ ಫರಾನ್ ಕುತ್ತಿಗೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.