ಚಾಕುವಿನಿಂದ ಇರಿದು ಓರ್ವನ ಕೊಲೆ

ವಿಜಯಪುರ, ಡಿ.27-ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಓರ್ವನನ್ನು ಕೊಲೆ ಮಾಡಿದ ಘಟನೆ ಇಲ್ಲಿಗೆ ಸಮೀಪದ ಖತಿಜಾಪುರ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಇಸ್ಮಾಯಿಲ್ ಮುಲ್ಲಾ (22) ಎಂದು ಗುರುತಿಸಲಾಗಿದೆ.
ಖಾಜಲ್ ಬೇಪಾರಿ ಎಂಬಾತ ಇಸ್ಮಾಯಿಲ್ ಮುಲ್ಲಾನ ತಾಯಿಗೆ ಬೈಯ್ದಿದ್ದ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದಕ್ಕೆ ಖಾಜಲ್ ಬೇಪಾರಿ ಜಗಳ ತೆಗೆದು ಚಿಕನ್ ಕತ್ತರಿಸುವ ಚಾಕುವಿನಿಂದ ಇರಿದು ಇಸ್ಮಾಯಿಲ್ ನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕಲಹದಲ್ಲಿ ಖಾಜಲ್ ಬೇಪಾರಿಗೂ ಸಹ ಗಾಯಗಳಾಗಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಆನಂದ ಠಕ್ಕಣ್ಣನವರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.