ಚಾಂಬೋಳ ಸಂಸ್ಥಾನ ಮಠದಲ್ಲಿ ಗುರು ವಂದನಾ ಸಮಾರಂಭ

ಬೀದರ :ಜು.14: ಭಾರತೀಯ ಸಂಸ್ಕøತಿಯಲ್ಲಿ ಗುರುಪರಂಪರೆಗೆ ದೊಡ್ದ ಸ್ಥಾನವಿದೆ. ಶ್ರೀ ಮಠವು ಕೂಡ ಸಾಧು,ಸಂತರ,ಬಸವಾದಿ ಶರಣರ,ವಚನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು .ಗುರು ಪೂರ್ಣಿಮಾ ನಿಮಿತ್ಯ ಗುರು ವಂದನಾ ಸಮಾರಂಭ ನಡೆಯಿತು. ಲಿಂಗೈಕ್ಯ. ರುದ್ರಮುನಿ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ. ತದನಂತರ ಪೂಜ್ಯ ಶ್ರೀ ರುದ್ರಮುನಿ ಪಟ್ಟದ್ದೇವರು ಮತ್ತು ಮುರುಘೇಂದ್ರ ದೇವರಿಗೆ ಶ್ರೀ ಮಠದ ಭಕ್ತರಾದ ಮಲ್ಲಿಕಾರ್ಜುನ್ ಬಿರಾದಾರ ದಂಪತಿಗಳಿಂದ ಪಾದಪೂಜೆ ನೆರವೇರಿತು.ಗ್ರಾಮದ ಅಲ್ಲದೆ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಬಂದು ಪೂಜ್ಯರಿಗೆ ಬಿಲ್ವ ಪತ್ರೆ ಸಮರ್ಪಿಸಿ ದರ್ಶನ ಪಡೆದು ಗುರುವಿನ ಆಶೀರ್ವಾದ ಪಡೆದುಕೊಂಡರು .ಎಂದು ಶ್ರೀ ರುದ್ರಮುನಿಶ್ವರ್ ಸೇವಾ ಸಮಿತಿಯ ಅಧ್ಯಕ್ಷರಾದ ಶಿವನಾಥ ಕತ್ತೆ ತಿಳಿಸಿದರು.