ಚಾಂದ್ ಫೌಂಡೇಶನ್‍ದಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ಬಾಗಲಕೋಟೆ, ಜೂ 6 : ನವನಗರದ ಸಮಾಜ ಸೇವಕ ಚಾಂದ ನದಾಫ್ ತಮ್ಮ ತಾಯಿಯ ಹೆಸರಿನ ಚಾಂದ್ ಫೌಂಡೇಶನ್‍ದಿಂದ ಸಂಕಷ್ಟದಲ್ಲಿರುವವರಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಯಿತು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಸಾಂಕೇತಿಕವಾಗಿ ಕಿಟ್ ವಿತರಣೆಗೆ ಚಾಲನೆ ನೀಡಿದರು. ಸುಮಾರು 150 ಕಿಟ್‍ಗಳನ್ನು ವಿತರಿಸಲಾಗಿದ್ದು, ಅಕ್ಕಿ, ಗೋದಿ, ಬೇಳೆ ಹಾಗೂ ಸಾಬೂನು ಸೇರಿದಂತೆ ದಿನಬಳಕೆಯ ಆಹಾರಧಾನ್ಯಗಳ ಕಿಟ್ ಇದಾಗಿದ್ದು, ಕೊರೊನಾ ಲಾಕ್‍ಡೌನ್‍ದಿಂದಾಗಿ ಅತೀ ಸಂಕಷ್ಟದಲ್ಲಿದ್ದವರನ್ನು ಗುರುತಿಸಿ ಕಿಟ್ ನೀಡಲಾಯಿತು.
ಚಾಂದ್ ಫೌಂಡೇಶನ್‍ದಿಂದ ಇಂತಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಕಳೆದ 4 ವರ್ಷಗಳಿಂದ ನಿರಂತರ ಸಾಮಾಜಿಕ ಕಾರ್ಯಗು ಜರಗುತ್ತಿವೆ. ನವನಗರದಲ್ಲಿ ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೇವೆ, ಕೆಲವೊಂದು ದೇವಾಲಯಗಳಿಗೆ ನಂದಾದೀಪ, ನವನಗರದ ಕೆಲವು ಮಸೀದಿಗಳ ಬಳಿ ನೀರಿನ ಅರವಟಿಗೆ ನಡೆಯುತ್ತಿವೆ.


ಕಡುಬಡತನದ ಬೇಗೆಯನ್ನು ಸ್ವತಃ ಅನುಭವಿಸಿ ಸ್ವ-ಪ್ರಯತ್ನದಿಂದ ಆರ್ಥಿಕ ಅಭಿವೃದ್ದಿ ಕಂಡ ಚಾಂದ ನದಾಫ್ ಒಬ್ಬ ಭಾವೈಕ್ಯ ಸಾಮಾಜಿಕ ಚಿಂತಕನಾಗಿದ್ದಾನೆ. ವಿದ್ಯಾವಂತನಾಗಿಲ್ಲದಿದ್ದರೂ ಮಾನವೀಯತೆಯ ವ್ಯಕ್ತಿಯಾಗಿದ್ದು, ಕೊರೊನಾದ ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ.