ಚಹಾ ಮಾರಿ ಸಾರಿಗೆ ನೌಕರರ ನಿನೂತನ ಪ್ರತಿಭಟನೆ

ಸವಣೂರ,ಎ.4: ರಾಜ್ಯ ಸರ್ಕಾದಿಂದ ಸ್ಪಂದನೆ ದೊರೆಯದ ಕಾರಣ ಜೀವನೋಪಾಯ ಕಷ್ಟವಾಗಿದೆ ಎಂದು ಸಾರಿಗೆ ನೌಕರರು ಬಸ್ ನಿಲ್ದಾಣದ ಎದುರು ಚಹಾ ಮಾರು ಮೂಲಕ ವಿನೂತನ ಪ್ರತಿಭಟನೆ ಕೈಗೊಂಡರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವಾರು ಭಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಸಹ ಸಮರ್ಪಕವಾದ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಜೀವನ ಸಾಗಿಸುವದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಜೀವನೋಪಾಯಕ್ಕಾಗಿ ಚಹಾ ಮಾರುವುದು ಲೇಸು ಎಂಬಂತೆ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಚಹಾ ಮಾರುವ ಮೂಲಕ ಪ್ರತಿಭಟನೆ ಕೈಗೊಂಡಿದ್ದೇವೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೌಕರರಂತೆ ಸಾರಿಗೆ ನೌಕರರು ಸಹ ಸಾಂಕ್ರಾಮಿಕ ರೋಗದ ಬೀತಿಯ ನಡುವೆಯು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ಸೇವೆಯನ್ನು ನೀಡುತ್ತಿದ್ದೇವೆ.
ಎಲ್ಲ ಸರ್ಕಾರಿ ನೌಕರರಂತೆ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಖಾಯಂಗೊಳಿಸಬೇಕು, 6ನೇ ವೇತನ ಜಾರಿ ಮಾಡಬೇಕು, ವೈದ್ಯಕೀಯ ವೆಚ್ಚವನ್ನು ನೀಡಬೇಕು, ತರಬೇತಿ ಆದೇಶ ಹಿಂಪಡೆಯಬೇಕು ಎನ್ನುವಂತ ಬೇಡಿಕೆ ಸೇರಿದಂತೆ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಡಿಸೆಂಬರ್ 2020ರಲ್ಲಿ ಮನವಿಯನ್ನು ಸಲ್ಲಿಸಲಾಗಿತ್ತು.
ಬೇಡಿಕೆಗಳ ಈಡೇರಿಕೆಗೆ ಸರ್ಕಾರ 3ತಿಂಗಳು ಕಾಲಾವಕಾಶವನ್ನು ನೀಡಿತ್ತು. ಆದರೆ, ಈವರೆಗೂ ಯಾವ ಬೇಡಿಕೆಗಳು ಸಹ ಇಡೇರಿಲ್ಲ ಆದ್ದರಿಂದ ಏಪ್ರೀಲ್ 1 ರಿಂದ ಕಪ್ಪು ಬಟ್ಟೆ ಧರಿಸುವ ಮೂಲಕ ಪ್ರತಿಭಟನೆ ಚಾಲನೆ ನೀಡಲಾಗಿತ್ತು.
ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಚಹಾ ಮಾರುವ ಮೂಲಕ ತೀರ್ವಗೊಳಿಸಲಾಗುತ್ತಿದೆ. ಇದರಂತೆ, ಇನ್ನೂ ಮೂರು ದಿನಗಳ ಕಾಲ ದಿನಕ್ಕೊಂದು ರೂಪದಲ್ಲಿ ಪ್ರತಿಭಟನೆ ಮುಂದುವರೆಯುತ್ತದೆ. ಅದರೊಳಗೆ, ಬೇಡಿಕೆ ಈಡೇರದೆ ಇದ್ದ ಕ್ಷಣದಲ್ಲಿ ಏಪ್ರೀಲ್ 7ರಿಂದ ಅನಿರ್ದಿಷ್ಠಾವದಿವರೆಗೆ ಸಾರಿಗೆಯನ್ನು ಬಂದ ಮಾಡಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಉಪವಾಸ ಸತ್ಯಾಗ್ರಹದ ಮೂಲಕ ತೀವೃಗೊಳಿಸಲಾಗುವದು ಎಂದು ಎಚ್ಚರಿಕ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಂಜುನಾಥ ಸೋಮನಹಳ್ಳಿ, ಬಸವರಾಜ ನೇಗೂಣಿ, ಬಸವರಾಜ ಚಿತೋಡಗಿ, ಎಂ.ಪ್ರಸಾದ, ಎಸ್.ಜಿ.ಗೌಡರ, ಈರಪ್ಪ ಮದಕಿನಾಳ, ಮುಲ್ಲಾ, ರಂಗಸ್ವಾಮಿ, ನವೀನ, ಬಿರಾದರ, ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.