ಚವಡಿಹಾಳ ಗ್ರಾ.ಪಂಗೆ ಡಿಜಿಟಲ್ ಗ್ರಂಥಾಲಯ ಸ್ಪರ್ಶ

ಇಂಡಿ:ಮಾ.12:ತಾಲೂಕಿನ ಎಲ್ಲ ಗ್ರಂಥಾಲಯಗಳಲ್ಲಿ ಡಿಜಿಟಲ್ ವ್ಯವಸ್ಥೆಯ ರೂಪ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ಇಲಾಖೆ ಮುಂದಾಗಿದ್ದು ಅದರಲ್ಲಿ ಚವಡಿಹಾಳ ಗ್ರಾ.ಪಂ ದಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯ ಇಂದಿನಿಂದ ಓದುಗರಿಗೆ ಸಿಗಲಿದೆ.

ವಿದ್ಯಾರ್ಥಿಗಳು, ಸಾರ್ವಜನಿಕರು ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟವನ್ನು ವೃದ್ಧಿಸುವಲ್ಲಿ ಡಿಜಿಟಲ್ ಗ್ರಂಥಾಲಯ ಪಾತ್ರ ಮಹತ್ವದ್ದಾಗಿದೆ.

ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಡಿಜಿಟಲ್ ಗ್ರಂಥಾಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಸ್ಮರ್ಧಾತ್ಮಕ ಪರೀಕ್ಷೆಗೆ, ಸಿಇಟಿ, ನೀಟ್, ಯುಪಿಎಸ್‍ಸಿ, ಕೆಪಿಎಸ್‍ಸಿ ಪರೀಕ್ಷೆಗೆ ಸಂಬಂದಿಸಿದ ಪುಸ್ತಕಗಳಿವೆ. ಸಿಬಿಎಸ್‍ಇ, ಪಿಸಿಎಸ್‍ಇ, ಎನ್‍ಸಿಇಆರ್‍ಟಿ ಪುಸ್ತಕಗಳು ಸಹ ನೆರವಾಗುತ್ತದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಾಲ ತಾಣ ಮಾಹಿತಿ ಇ- ಸಾರ್ವಜನಿಕ ಗ್ರಂಥಾಲಯ ಆಪ್ ಮೂಲಕ ಇ ಪುಸ್ತಕಗಳು, ಶೈಕ್ಷಣಿಕ ವಿಡಿಯೋಗಳು ಲಭ್ಯವಿರುವದರಿಂದ ಯುವಕರಿಗೆ ಮತ್ತು ನಾಗರಿಕರ ಜ್ಞಾನ ಅಭಿವೃದ್ಧಿಗೆ ಬಹಳ ಅನುಕೂಲವಾಗಲಿದೆ.

ಕಂಪ್ಯೂಟರ್, ಲ್ಯಾಪಟಾಪ, ಟ್ಯಾಬ್ ಮೂಲಕ ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿದೆ.


ಜಿಲ್ಲೆಯಲ್ಲಿ 172 ಡಿಜಿಟಲ್ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗಿದೆ. ಬರುವ ದಿನಗಳಲ್ಲಿ ಪ್ರತಿ ಗ್ರಾ.ಪಂಗಳಲ್ಲಿ ಡಿಜಿಟಲ್ ಗ್ರಂಥಾಲಯ ಮಾಡುತ್ತೇವೆ. ಜಿಲ್ಲೆಯಲ್ಲಿಯೇ ವಿಶೆಷತೆ, ವಿನೂತನ ಚವಡಿಹಾಳ ಗ್ರಾ.ಪಂ ಮೊದಲಹೆಜ್ಜೆ.

ರಾಹುಲ್ ಶಿಂಧೆ

ಸಿಇಓ ವಿಜಯಪುರ


ತಾ.ಪಂ ಮತ್ತು ಜಿ.ಪಂ ನೆರವಿನಿಂದ ಮತ್ತು ಗ್ರಾ.ಪಂ ಸಹಕಾರದಿಂದ ನರೇಗಾದ ಮಾನವ ಸಂಪನ್ಮೂಲ ಬಳಸಿಕೊಂಡು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದೆ

ಸಿ.ಜಿ.ಪಾರೆ ಪಿಡಿಓ ಚವಡಿಹಾಳ