ಚಳ್ಳಕೆರೆ ಶಾಸಕರಿಂದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ

ಚಳ್ಳಕೆರೆ. ಮೇ.೧೪; ಶಾಸಕ ಟಿ ರಘುಮೂರ್ತಿ ನೇತೃತ್ವದಲ್ಲಿ  ಕೋವಿಡ್ ಟಾಸ್ಕ್ ಫೋರ್ಸ್ ತಂಡದೊಂದಿಗೆ ಸಭೆ ಜರುಗಿತು.ಕೋವಿಡ್ ನಿಯಂತ್ರಣದ ಕುರಿತಂತೆ ಕೋವಿಡ್ ಟಾಸ್ಕ್ ಫೋರ್ಸ್ ತಂಡದಿಂದ ಶಾಸಕರು ಮಾಹಿತಿ ಪಡೆದರು. ಈ ವೇಳೆ ಚಳ್ಳಕೆರೆ ತಾಲೂಕು ವ್ಯಾಪ್ತಿಯಲ್ಲಿನ ಕೋವಿಡ್ ನಿಯಂತ್ರಣದ ಕುರಿತಂತೆ ಮಾಹಿತಿ ಪಡೆದ ಶಾಸಕರು, ಕೋವಿಡ್ ನಿಯಂತ್ರಿಸಲು ತಾಲೂಕು ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.