ಚಳ್ಳಕೆರೆ ಯುವಕರ ಮಾದರಿ ಕಾರ್ಯ

ಚಳ್ಳಕೆರೆ.ಜೂ.10 : ಕೊವಿಡ್‌ನಿಂದ ಆದ ಲಾಕ್‌ಡೌನ್‌ನಲ್ಲಿ ಕೂಲಿ ಕಾರ್ಮಿಕರಿಗೆ, ಕೆಳವರ್ಗದ ಕಾರ್ಮಿಕರಿಗೆ ಹಾಗೂ ಕೊವಿಡ್ ಸೋಂಕಿಗೆ ಒಳಗಾದವರು ಒಂದು ಹೊತ್ತಿನ ಊಟಕ್ಕೆ ತೊಂದೆಯಾಗಿರುವುದನ್ನು ಗಮನಿಸಿದ ಯುವಕರ ತಂಡವೊಂದು ಕರ್ಫ್ಯೂ ಆರಂಭ ದಿನದಿಂದಲೂ ದಿನನಿತ್ಯ ನಿರಂತರವಾಗಿ 300ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ನೀರಿನ ಬಾಟಲುಗಳನ್ನು ಉಚಿತವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ನಗರದ ಸುಮಾರು 10ಕ್ಕೂ ಹೆಚ್ಚು ಯುವಕರ ತಂಡವೊಂದು ಮಧ್ಯಾಹ್ನದ ಊಟ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ..ಈ ಕಾರ್ಯಕ್ಕೆ ಪ್ರತಿದಿನ ನಾಲ್ಕು ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಯುವಕರೆಲ್ಲ ಸೇರಿ ಈ ವೆಚ್ಚವನ್ನು ತಾವೇ ಭರಿಸಿ ಸಂಕಷ್ಟದಲ್ಲಿರುವ ಭಿಕ್ಷುಕರು, ನಿರ್ಗತಿಕರನ್ನು ಮತ್ತು ರಸ್ತೆಯಲ್ಲಿ ಸಂಚರಿಸುವ ಲಾರಿ ಡ್ರೈವರ್‌ಗಳಿಗೆ ಹಾಗೂ ನೆಹರು ವೃತ್ತದಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳಿಗೆ ಊಟವನ್ನು ನೀಡುತ್ತಾರೆ. ತಂಡದ ದಿಲೀಪ್ ಪತ್ರಿಕೆಯೊಂದಿಗೆ ಮಾತನಾಡಿ, ಲಾಕ್ ಡೌನ್ ಮುಗಿಯುವವರೆಗೂ ನೀಡಲು ಸಿದ್ಧರಿದ್ದೇವೆ, ನಮಗೆ ಅಸಹಯಾಕರು, ನಿರ್ಗತಿಕರು, ಕೊವಿಡ್ ಸೋಂಕಿತಯ ವ್ಯಕ್ತಿಗಳ ಕುಟುಂಬಗಳ ಆಸರೆಗೆ ನಾವು ಸಹಾಯಹಸ್ತ ನೀಡುತ್ತೆವೆ ನಮ್ಮ ಪೋನ್‌ಗೆ ಕರೆ ಮಾಡಿದರೆ ತಾವಿದಲ್ಲಿಗೆ ಹೊಗಿ ಉಚಿತವಾಗಿ ಊಟದ ಪ್ಯಾಕೆಟ್, ನೀರಿನ ಬಟಲ್, ನೀಡುತ್ತೇವೆ ಎಂದರು.ಈ ಸಂಧರ್ಭದಲ್ಲಿ ತಂಡದ ದಿಲೀಪ್ ಎಂ.ಆರ್ , ಮಂಜುನಾಥ, ಸಿದ್ದೇಶ, ಸಂದೀಪ, ಅನು, ತಿಪ್ಪೇಶ್, ಶಂಕರಮೂರ್ತಿ, ಮಾರುತಿ, ಸಂತೋಷ್, ಪವನ, ಮುಷಬೇರ್, ಆದಿಕೇಶವ, ಆದರ್ಶ್, ಗಿರೀಶ.ಪಿ ಮತ್ತಿತರರು ಸಹಕಾರ ನೀಡಿ ಸಾರ್ವಕಜನಿಕ ಸೇವೆಗೆ ಮುಂದಾಗಿದ್ದಾರೆ.