ಚಳ್ಳಕೆರೆಯಲ್ಲಿ ಶಾಲಾ ಮಕ್ಕಳಿಂದ ಇಸ್ರೋ ವಿಜ್ಞಾನಿಗಳಿಗೆ ನಮನ

ಸಂಜೆವಾಣಿ ವಾರ್ತೆ

ಚಳ್ಳಕೆರೆ. ಆ.೨೪; ಚಂದ್ರಯಾನ-3 ನಿಗದಿತ ಸಮಯ ಹಾಗೂ ಸ್ಥಳಕ್ಕೆ  ಸುಗಮವಾಗಿ ಇಳಿದ ಪರಿಣಾಮವಾಗಿ ಚಳ್ಳಕೆರೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ಶಾಲಾ ಮಕ್ಕಳು ಹರ್ಷ ವ್ಯಕ್ತಪಡಿಸಿದರು.ಇಲ್ಲಿನ ವಾಸವಿ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಚಂದ್ರಯಾನ 3 ಯಶಸ್ವಿಯಾಗಿ ನೆರವೇರಿಸಿದ ಇಸ್ರೋ  ವಿಜ್ಞಾನಿಗಳಿಗೆ  ಹಾಗೂ ಭಾರತ  ಮಾತೆಗೆ  ಝೇಂಕಾರ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಶಿಕ್ಷಕ ಓ ರಂಗಣ್ಣ, ಧನಂಜಯ, ಆಡಳಿತ ಅಧಿಕಾರಿ  ಶ್ರೀಧರ   ಕುಮಾರ್,  ನಾಗೇಂದ್ರ   ರಾಘವೇಂದ್ರ ಮತ್ತಿತರರು ಹಾಜರಿದ್ದರು.