ಚಳಿಗಾಲದ ಸಲಹೆ

ಚಳಿಗಾಲದಲ್ಲಿ ಚರ್ಮ ತೇವಾಂಶವನ್ನು ಕಳೆದುಕೊಂಡು ಡ್ರೈ ಆಗುತ್ತದೆ. ಇದರಿಂದ ಹೆಚ್ಚಿನ ಪರಿಣಾಮ ಬೀರುವುದು ಪಾದಗಳ ಮೇಲೆ.
ಯಾಕೆಂದರೆ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಪಾದದ ಚರ್ಮ ತುಂಬಾ ದಪ್ಪವಾಗಿರುವುದರಿಂದ ಅದು ಬೇಗ ಬಿರುಕು ಬಿಡುತ್ತದೆ. ಇದರಿಂದ ನೋವು ಉಂಟಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಪಾದವನ್ನು ಈ ರೀತಿ ಆರೈಕೆ ಮಾಡಿ.
ಚಳಿಗಾಲದಲ್ಲಿ ಪಾದಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ಇದರಿಂದ ಪಾದ ಬಿರುಕು ಬಿಡುವುದು ಕಡಿಮೆಯಾಗುತ್ತದೆ.
ಪಾದದ ಚರ್ಮ ದಪ್ಪವಾಗಿರುವುದರಿಂದ ಸ್ನಾನ ಮಾಡುವ ವೇಳೆ ಪಾದವನ್ನು ಒರಟಾದ ವಸ್ತುವಿನಿಂದ ಉಜ್ಜಿಕೊಳ್ಳುತ್ತಿರಿ. ಇದರಿಂದ ಚರ್ಮ ಮೃದುವಾಗುತ್ತದೆ.
ಪಾದಗಳು ಬಿರುಕು ಬಿಡುವುದನ್ನು ತಡೆಯಲು ಪ್ರತಿದಿನ ಪಾದಗಳಿಗೆ ಬಾಡಿಲೋಷನ್ ಹಚ್ಚಿ. ಇದರಿಂದ ಪಾದದ ಚರ್ಮ ತೇವಾಂಶದಿಂದ ಕೂಡಿರುತ್ತದೆ.
ಪ್ರತಿದಿನ ರಾತ್ರಿ ಆಲಿವ್ ಎಣ್ಣೆಯನ್ನು ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ ಬಳಿಕ ಸಾಕ್ಸ್ ಧರಿಸಿ. ಹಾಗೇ ಪ್ರತಿದಿನ ೨ ಲೀಟರ್ ಗಿಂತ ಹೆಚ್ಚು ನೀರನ್ನು ಕುಡಿಯಿರಿ. ಇದರಿಂದ ಇಡೀ ದೇಹ ತೇವಾಂಶದಿಂದ ಕೂಡಿರುತ್ತದೆ.