ಚಳಿಗಾಲದ ಸಮಸ್ಯೆಗೆ ಮನೆಮದ್ದು

ಒಂದು ಚಮಚ ಜೇನಿಗೆ ಸ್ವಲ್ಪ ಕರಿಮೆಣಸನ್ನು ಪುಡಿ ಮಾಡಿ ಅದಕ್ಕೆ ತುಳಸಿ ರಸವನ್ನು ಸ್ವಲ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಬೇಕು.
ತುಳಸಿ ಎಲೆಯನ್ನು ಅಗೆಯುತ್ತಾ ಇರುವುದು ಅಥವಾ ತುಳಿಸಿ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಅದನ್ನು ಕುಡಿಯುವುತ್ತಿದ್ದರೆ ನೆಗಡಿ, ಕೆಮ್ಮು ಬರುವುದಿಲ್ಲ.

ಕೆಮ್ಮಿಗೆ ಶುಂಠಿ ಹಾಕಿ ಮಾಡಿದ ಟೀ ಒಳ್ಳೆಯದು.

ಶುಂಠಿ ರಸಕ್ಕೆ ಸ್ವಲ್ಪ ಕರಿಮೆಣಸು ಮತ್ತು ಜೇನು ಮಿಶ್ರ ಮಾಡಿ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮನ್ನು ನಿಚಾರಿಸಬಹುದು.

ಒಣಶುಂಠಿ ಹಾಕಿದ ಕಾಫಿಯನ್ನು ಕುಡಿಯುವುದು ಕೂಡ ಒಳ್ಳೆಯದು.

ಚಳಿಗಾಲದಲ್ಲಿ ಕರಿಮೆಣಸಿನ ರಸ ಮಾಡಿ ಕುಡಿಯುವುದು ಕೂಡ ತುಂಬಾ ಒಳ್ಳೆಯದು.

ಹವಾನಿಯಂತ್ರಣ ಕೊಠಡಿಯಲ್ಲಿ ಅಥವಾ ಹೊರಗಡೆ ತಿರುಗಾಡಲು ಹೋಗುವಾಗ ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳಬೇಕು.

ತಲೆಯನ್ನು ಉಣ್ಣೆಯ ಸ್ಕಾರ್ಫ್ ಬಳಸುವುದು ಸೂಕ್ತ.

ಕರ್ಚೀಫ್ ಗೆ ಸ್ವಲ್ಪ ನೀಲಗಿರಿಯ ಎಣ್ಣೆಯನ್ನು ಹಾಕಿ ಅದರ ವಾಸನೆಯನ್ನು ತೆಗೆದು ಕೊಳ್ಳುತ್ತಿದ್ದರೆ ಸೀನು ಬರುವುದಿಲ್ಲ.

ಮುಖ ತೊಳೆಯುವಾಗ, ಸ್ನಾನಮಾಡುವಾಗ ಬಿಸಿ ನೀರನ್ನು ಬಳಸಬೇಕು.

ಕೈಯನ್ನು ಆಗಾಗ್ಗೆ ತೊಳೆಯುತ್ತಿರಬೇಕು, ಅಲ್ಲದೆ ಕೈನಿಂದ ಪದೇಪದೆ ಕಣ್ಣು, ಬಾಯಿ ಮತ್ತು ಮೂಗನ್ನು ಮುಟ್ಟುತ್ತಿರಬಾರದು.

ಜ್ವರವಿರುವವರಿಂದ ಸ್ವಲ್ಪ ದೂರವಿರಿ.ಬಆರೋಗ್ಯಕರವಾದ ಆಹಾರಕ್ರಮವನ್ನು ಪಾಲಿಸಬೇಕು.
ಒಂದು ವೇಳೆ ಜ್ವರ ಬಂದರೆ ಮನೆಯಲ್ಲಿಯೆ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಇದರಿಂದ ಜ್ವರ ಮತ್ತೊಬ್ಬರಿಗೆ ಹರಡುವುದನ್ನು ತಡೆಯಬಹುದು