ಚಳಿಗಾಲದ ಅನಾರೋಗ್ಯ ನಿವಾರಣೆಗೆ ನಿತ್ಯ ಯೋಗಭ್ಯಾಸ ಅವಶ್ಯ.

ಸೊರಬ.ನ.24: ಚಳಿಗಾಲ ಪ್ರಾರಂಭವಾಗುತಿದ್ದು ಚಳಿಯಿಂದ ಒಣ ಚರ್ಮ, ಒಡೆದ ತುಟಿಗಳು, ದೇಹದ ನೋವು, ಶೀತ, ಕೆಮ್ಮು, ವೈರಲ್ ಸೋಂಕುಗಳು ಮತ್ತು ಕೀಲು ನೋವುಗಳು ಸಾಮಾನ್ಯ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ಮತ್ತು ಸಕ್ರಿಯವಾಗಿರಲು ಯೋಗಭ್ಯಾಸ ಅತೀ ಅವಶ್ಯ. ಯೋಗದಿಂದ ನೀವು ನಿಮ್ಮ ದೇಹ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ನಿಮ್ಮ ದೇಹವನ್ನು ಚೈತನ್ಯಗೊಳಿಸಬಹುದು, ನಿಮ್ಮ ಮೆದುಳನ್ನು ಚುರುಕಾಗಿಸಬಹುದು ಮತ್ತು ಆರೋಗ್ಯದಿಂದಿರಬಹುದು ಎಂದು ಯೋಗಾಚಾರ್ಯ ರವಿ ಕೆ.ಅಂಬೇಕರ್ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದಲ್ಲಿ ತರಬೇತಿ ನೀಡಿ ಅವರು ಮಾತನಾಡಿದರು.ಯೋಗವು ಈ ಚಳಿಗಾಲದಲ್ಲಿ ನಿಮ್ಮ ಶರೀರದ ಹೆಚ್ಚುವರಿ ರಕ್ಷಣಾತ್ಮಕ ಕವಚವಾಗಿ ಕೆಲಸ ಮಾಡುತ್ತದೆ, ಸಾಮಾನ್ಯ ಸೋಂಕುಗಳ ವಿರುದ್ಧ ಹೋರಾಡಲು ನಿಮಗೆ ಉಷ್ಣತೆ ಮತ್ತು ಶಕ್ತಿಯನ್ನು ನೀಡುತ್ತದೆ. ಋತುವಿನ ಉತ್ಸಾಹವನ್ನು ಸಂಪೂರ್ಣವಾಗಿ ಆನಂದಿಸಲು ನಿಮಗೆ ಸಹಾಯ ಮಾಡುತ್ತದೆ. ಯೋಗ ನಿಮ್ಮನ್ನು ದಿನವಿಡೀ ಕ್ರಿಯಾಶೀಲವಾಗಿರಿಸುವ ಜೊತೆಗೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಎದುರಿಸುವ ಕೀಲು ನೋವು ಅಥವಾ ಸ್ನಾಯುಗಳಲ್ಲಿನ ಬಿಗಿತದ ಸಾಮಾನ್ಯ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ಎಂದು ತಿಳಿಸಿದರು.ಆಡಳಿತ ‌ಜನನ ಜೊತೆಗೆ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ., ನಾಗೇಶ್, ಆರೋಗ್ಯ ಸುರಕ್ಷಣಾಧಿಕಾರಿ ನಿರ್ಮಲಾ ಟಿ.,ಸಮುದಾಯ ಆರೋಗ್ಯಾಧಿಕಾರಿಗಳಾದ ಕು.ಭಾರತೀ, ಮಂಜುಶ್ರೀ ಮುಂತಾದವರು ಹಾಜರಿದ್ದರು.