ಚಳಿಗಾಲದಲ್ಲಿ ಮದ್ಯಪಾನ ಅಪಾಯ

ಡಿಸೆಂಬರ್ ೨೯ ರಿಂದ ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನಗಳಲ್ಲಿ ತೀವ್ರ ಚಳಿ ಹೆಚ್ಚಾಗಲಿದ್ದು, ಚಳಿಗಾಲದಲ್ಲಿ ಮದ್ಯಪಾನ ಮಾಡಬಾರದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಉತ್ತರ ಭಾರದ ಆನೇಕ ಭಾಗಗಳಲ್ಲಿ ಚಳಿ ಹೆಚ್ಚಾಗುತ್ತಿದ್ದು, ವರ್ಷಾಂತ್ಯದ ಪಾರ್ಟಿಗಳಲ್ಲಿ ಹಾಗೂ ಮನೆಯಲ್ಲಿ ಮದ್ಯಪಾನ ಮಾಡಬಾರದು ಎಂದು ತಿಳಿಸಿದೆ. ಇನ್ನು ಚಳಿಗಾಲದಲ್ಲಿ ಮದ್ಯಪಾನ ಮಾಡಿದರೆ ದೇಹದಲ್ಲಿ ಉಷ್ಣತೆಯನ್ನ ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ.
ಅಲ್ಲದೆ ತೀವ್ರ ಚಳಿಯಿಂದ ಕಾಪಾಡಿಕೊಳ್ಳಲು ವಿಟಮಿನ್ ಸಿ ಭರಿತ ಹಣ್ಣುಗಳನ್ನು ಸೇವಿಸಿ ಮತ್ತು ಚರ್ಮವನ್ನು ತೇವಗೊಳಿಸಿ ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.
ಡಿಸೆಂಬರ್ ೨೯ ರಿಂದ ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನಗಳಲ್ಲಿ ತೀವ್ರ ಚಳಿಯಿದ್ದು ಇದರಿಂದ ಹಲವಾರು ರೋಗಗಳು ಬರುವ ಸಾಧ್ಯತೆ ಇದೆ ಹವಾಮಾನ ಇಲಾಖೆ ನಿರೀಕ್ಷಿಸಲಾಗಿದೆ.
ಇನ್ನು ಹಿಮಾಲಯದ ಪಾಶ್ಚಿಮಾತ್ಯ ಪ್ರದೇಶದಲ್ಲಿ ವ್ಯತ್ಯಾಸ ಕಂಡು ಬರುವ ಹಿನ್ನಲೆ ದ್ರವ ರೂಪದ ಪಾದರಸ ಹೆಚ್ಚಾಗುವ ಪರಿಣಾಮ ಡಿಸೆಂಬರ್ ೨೯ ರಿಂದ ಪಂಜಾಬ್ ಹರಿಯಾಣ, ಚಂಡೀಘಡ್, ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಚಳಿಯ ತೀವ್ರತಡ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.
ಇನ್ನು ಹವಾಮಾನ ಇಲಾಖೆ ಪ್ರಕಾರ ಕನಿಷ್ಠ ತಾಪಮಾನವು ೧೦ ಡಿಗ್ರಿಗಿಂತ ಕಡಿಮೆ, ಗರಿಷ್ಠ ತಾಪಮಾನವು ೪.೫ ಡಿಗ್ರಿ ಸೆಲ್ಸಿಯಸ್ ಅಥವಾ ಸಾಮಾನ್ಯಕ್ಕಿಂತ ೬.೪ ಡಿಗ್ರಿ ಸೆಲ್ಸಿಯಸ್ ತಾಪಮಾನ ಆಗಿರುವ ಸಂಸರ್ಭದಲ್ಲಿ ಚಳಿಗಾಲದ ದಿನ ಎಂದು ಪರಿಗಣಿಸಲಾಗುವುದು.