ಚಳಿಗಾಲದಲ್ಲಿ ಕೂದಲ ಆರೈಕೆ

ಚಳಿಗಾಲ ಬಂತೆಂದರೆ ಕೇವಲ ಚರ್ಮದ ಸಮಸ್ಯೆಯಲ್ಲ. ಹಲವರಿಗೆ ಕೂದಲ ಸಮಸ್ಯೆಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರು, ಪುರುಷರು ಎಲ್ಲರೂ ತಮ್ಮ ಉದುರುವ ಕೂದಲಿನ ಬಗ್ಗೆ ಚಿಂತಿತರಾಗಿರುತ್ತಾರೆ. ಈ ಋತುವಿನಲ್ಲಿ ಕೂದಲಿಗೆ ಯಾವುದೇ ರೀತಿಯ ಎಣ್ಣೆ, ಶಾಂಪೂ ಅಥವಾ ಕಂಡಿಷನರ್ ಕೆಲಸ ಮಾಡುವುದಿಲ್ಲ. ಹೀಗಾಗಿ ಸಾಮಾನ್ಯವಾಗಿ ಕೆಲ ಟಿಪ್ಸ್ ಅನುಸರಿಸಬೇಕು

ಈ ಸಮಯದಲ್ಲಿ ಆಮ್ಲಾ ರಸ ನಿಮಗೆ ಸಹಾಯಕವಾಗಿದೆ. ಕೂದಲಿಗೆ ಆಮ್ಲಾ ರಸ ಲೇಪಿಸಿ, ಸ್ವಲ್ಪ ಸಮಯದ ನಂತರ ಅದನ್ನು ಶುಚಿಗೊಳಿಸುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ. ಇದರಲ್ಲಿ ರಾಸಾಯನಿಕಗಳ ಪ್ರಮಾಣ ಕಡಿಮೆಯಿರುವುದರಿಂದ ಇದು ಕೂದಲ ಸಮಸ್ಯೆ ಬಗೆಹರಿಸುವುದರ ಜೊತೆಗೆ ಕೂದಲನ್ನು ಹೊಳಪಾಗಿಸುತ್ತದೆ.

ಅಲೋವೆರಾವು ಆರೋಗ್ಯಕ್ಕೆ ಮಾತ್ರವಲ್ಲದೆ ಮುಖ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯ ಮನೆ ಮದ್ದು. ಹಾಗಾಗಿ ನಿಮ್ಮ ಕೂದಲಿನ ಸರಿಯಾದ ಕಾಳಜಿಯನ್ನು ನೀವು ಬಯಸುವುದಾದರೆ ಕೂದಲಿಗೆ ಅಲೋವೇರಾ ಜೆಲ್ ಅನ್ನು ಲೇಪಿಸಿ, ಇದು ಕೂದಲು ಒರಟಾಗಿರುವುದರಿಂದ ರಕ್ಷಿಸಿ ಹೊಳೆಯುವಂತೆ ಮಾಡುತ್ತದೆ.

ನಿಂಬೆಹಣ್ಣಿನ ರಸ ಮತ್ತು ಮೊಸರು ಕೂದಲಿಗೆ ಪ್ರಯೋಜನಕಾರಿ. ಇದಕ್ಕಾಗಿ, ಎರಡು ಮೂರು ಸ್ಪೂನ್ ನಿಂಬೆ ರಸವನ್ನು ಅರ್ಧ ಬೌಲ್ ಮೊಸರಿನೊಂದಿಗೆ ಸೇರಿಸಿ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಳಿಕ ಕೂದಲನ್ನು ತೊಳೆಯಿರಿ. ಇದರಿಂದ ಡ್ಯಾಂಡ್ರಫ್ ಸಮಸ್ಯೆ ದೂರವಾಗುತ್ತದೆ.

ಕೂದಲಿಗೆ ಈರುಳ್ಳಿ ರಸವು ಪ್ರಯೋಜನಕಾರಿಯಾಗಿದೆ. ಕೂದಲಿಗೆ ಅದನ್ನು ಅನ್ವಯಿಸುವುದರಿಂದ ಕೂದಲು ಉದುರುವುದನ್ನು ತಪ್ಪಿಸುವುದು ಮಾತ್ರವಲ್ಲ, ಜೊತೆಗೆ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ತಲೆಯಲ್ಲಿ ತುರಿಕೆ(ತಲೆಕಡಿತ) ಸಮಸ್ಯೆಯಿದ್ದರೆ ಈರುಳ್ಳಿ ಅದನ್ನು ನಿವಾರಿಸುತ್ತದೆ. ಆದ್ದರಿಂದ, ವಾರದಲ್ಲಿ ಕನಿಷ್ಠ ಎರಡು ಬಾರಿ ನಿಮ್ಮ ಕೂದಲಿಗೆ ಈರುಳ್ಳಿ ರಸ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.