ಚಳಕಾಪೂರ ಶ್ರೀ ಸಿದ್ಧಾರೂಢ ಮಠ: ವೈಭವದ ರಥೋತ್ಸವ

ಬಾಲ್ಕಿ: ಎ.1:ತಾಲೂಕಿನ ಚಳಕಾಪೂರ ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ 187ನೇ ಜಯಂತಿ ಮಹೋತ್ಸವ ನಿಮಿತ್ಯ ವೈಭವದ ರಥೋತ್ಸವ ನಡೆಯಿತು.
ರಥೋತ್ಸವಕ್ಕೆ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದ ಸದ್ಗುರು ಡಾ| ಶಿವಕುಮಾರ ಮಹಾಸ್ವಾಮಿಗಳು ಚಾಲನೆ ನೀಡಿದರು. ರಥೋತ್ಸವವು ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢರ ಮಠದಿಂದ ಗ್ರಾಮದ ಆಂಜನೇಯ ದೇವಸ್ಥಾನದವರೆಗೆ ಎಳೆದು ತರಲಾಯಿತು. ಈ ಸಂದರ್ಭದಲ್ಲಿ ಸದ್ಗುರು ಸಿದ್ಧಾರೂಢ ಮಹಾರಾಜಕೀ ಜೈ ಎನ್ನುವ ಜೈಘೋಷದೊಂದಿಗೆ ಸಾವಿರಾರು ಭಕ್ತರ ಭಕ್ತಿ ಭಾವಕ್ಕೆ ಸಾಕ್ಷಿಯಾದರು. ರಥೋತ್ಸವದಲ್ಲಿ ಶ್ರೀಮಠದ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ಶ್ರೀ ಶಂಕರಾರೂಢ ಸ್ವಾಮೀಜಿ, ಅದ್ವೈತಾನಂದ ಸ್ವಾಮಿ, ಪರಮಾನಂದ ಸ್ವಾಮಿ, ಸ್ವರೂಪಾನಂದ ಸ್ವಾಮಿ, ದಯಾನಂದ ಸ್ವಾಮಿ, ಗಣಪತಿ ಮಹಾರಾಜರು, ಮಾತೋಶ್ರೀ ಲಕ್ಷ್ಮೀ ದೇವಿ, ಮಾತೋಶ್ರೀ ಸಿದ್ದೇಶ್ವರಿತಾಯಿ, ಮಾತೋಶ್ರೀ ಅಮೃತಾನಂದಮಯಿ, ಜಡಿಸಿದ್ಧೇಶ್ವರ ಸ್ವಾಮಿಗಳು, ಸೋಮೇಶ್ವರಾನಂದ ಸ್ವಾಮಿಗಳು, ಪೂರ್ಣಾನಂದ ಸ್ವಾಮಿಗಳು, ಸೇರಿದಂತೆ ಗ್ರಾಮದ ಪ್ರಮುಖರಾದ ನರೇಂದ್ರ ಪಾಟೀಲ, ಕಿಶೋರ ಕುಲಕರ್ಣೀ, ಪ್ರಭು ಮಾಸುಲದಾರ, ಯಲ್ಲಾಲಿಂಗ ರೊಟ್ಟೆ ಸೇರಿದಂತೆ ಮುಂತಾದವರು ಇದ್ದರು.