ಚಲುವಾದಿ ಜಿಲ್ಲಾ ಬೃಹತ್ ಸಮಾವೇಶ

ಮಾನ್ವಿ,ಫೆ.೨೬- ಮಾ.೩ ರಂದು ಲಿಂಗಸುಗೂರ ತಾಲೂಕಿನಲ್ಲಿ ಬೃಹತ್ ಚಲುವಾದಿ ಮಹಾಸಭಾದ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾ ತಾಲೂಕ ಅಧ್ಯಕ್ಷ ಶಿವರಾಜ ಉಮಳಿಹೊಸುರು ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಡಾ.ಜಿ. ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳೆ, ಮಾಜಿ ಶಾಸಕಿ ಮೋಟಮ್ಮ,ಸಕಲೇಶಪುರ ಶಾಸಕ ಪ್ರ ಸಾಧಬಾಯಿ, ಎಚ್.ಕೆ.ಕುಮಾರಸ್ವಾಮಿ, ಅನ್ನದಾನಿ ಸೇರಿದಂತೆ ಅನೇ ಕರು ಭಾಗವಹಿಸಲಿದ್ದಾರೆ. ಮಹಾ ಸಭಾ ರಾಜ್ಯಾಧ್ಯಕ್ಷ ಡಾ.ಕೆ.ಶಿವರಾಂ, ಜಿಲ್ಲಾಧ್ಯಕ್ಷ ನಾಗಲಿಂಗಯ್ಯ ಸ್ವಾಷಮಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದರು, ನಗರದಿಂದ ಸಾವಿರಕ್ಕೂ ಅಧಿಕ ಜನರು ಲಿಂಗಸೂಗೂರು ಸಮಾವೇಶ ದಲ್ಲಿ ಭಾಗವಹಿಸಲಿದ್ದಾರೆ ಎಂದರು.
ನಂತರ ಲಕ್ಷ್ಮಣ ಜಾನೇಕಲ್ ಮಾತನಾಡಿ ಸಮಾವೇಶ ಯಶಸ್ಸಿಗೆ ಜಿಲ್ಲೆ ಎಲ್ಲಾ ತಾಲೂಕಗಳ ಸುಮಾರು ಜನರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸುವಂತೆ ಮನವಿ ಮಾಡಿದರು. ಲಿಂಗಸೂಗೂರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಪಕ್ಷದ ಟಿಕೆಟ್ ನೀಡುವಂತೆ ಆಗ್ರಹಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹನುಮಂತ ಸೀಕಲ್, ನರಸಪ್ಪ ಜೂಕುರು, ಹನುಮಂತರಾಯ ಕಪಗಲ್, ಈಶಪ್ಪ ಬೈಲ್ ಮಾರ್ಚಡ್, ದತ್ತಾತ್ರೇಯ ಕೊಟ್ನೇಕಲ್,ನರಸಿಂಹ ಸೀಕಲ್ ಸುರೇಶ ಹಿರೇಕೊಟ್ನಕಲ್, ಪರುಶುರಾಮ್ ಹೀರೇಕೊಟ್ನಕಲ್ ಬಸವರಾಜ ಪೋತ್ನಳ ಇನ್ನಿತರರು ಇದ್ದರು.