ಚಲುವರಾಯಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಜೆಡಿಎಸ್ ಮುಖಂಡರು ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಬಗ್ಗೆ ಚರ್ಚೆಗೆ ಬರಲಿ-ಸಿ.ಎಸ್.ಪುಟ್ಟರಾಜು

ಸಂಜೆವಾಣಿ ವಾರ್ತೆ
ಮಂಡ್ಯ: ಕೆರಗೋಡು ಧ್ವಜ ವಿವಾದದ ಹಿನ್ನೆಲೆಯಲ್ಲಿ ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎಂದಿರುವ ಸಚಿವ ಚಲುವರಾಯಸ್ವಾಮಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಸವಾಲು ಹಾಕಿದರು. ಸಚಿವ ಚಲುವರಾಯಸ್ವಾಮಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇವೇಗೌಡರ ಕುಟುಂಬ ಈ ಜಿಲ್ಲೆಗೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಚರ್ಚಿಸಲು ವೇದಿಕೆ ವ್ಯವಸ್ಥೆ ಮಾಡುತ್ತೇನೆ. ನೀವು ನಾವು ಒಟ್ಟಿಗೆ ಕೂರೋಣ. ದೇವೇಗೌಡರು ನೀರಾವರಿ ಮಂತ್ರಿಗಳಾಗಿದ್ದ ಸಂದರ್ಭದಿಂದ ಪ್ರಧಾನಿಯಾಗಿದ್ದ ಅವಧಿಯವರೆಗೆ ಸಮಗ್ರವಾಗಿ ಅಭಿವೃದ್ಧಿ ಮಾಡಿರುವ ವಿಚಾರವಾಗಿ ಇರಬಹುದು, ಈ ಜಿಲ್ಲೆಯ ಏಕತೆಗೆ ತೆಗೆದುಕೊಂಡ ವಿಚಾರ ಇರಬಹುದು. ಯಾವ ಯಾವ ಪರಿಶ್ರಮಗಳನ್ನು ಹಾಕಿದ್ದಾರೆ ಎಳೆಎಳೆಯಾಗಿ ಬಿಡಿಸಿಡುತ್ತೇನೆ ಬನ್ನಿ ಪತ್ರಕರ್ತರ ಭವನದಲ್ಲಿ ನಿರ್ಣಯ ಮಾಡಿಕೊಳ್ಳೋಣ ಎಂದು ಪಂಥಾಹ್ವಾನ ನೀಡಿದರು.
ನಮ್ಮ ಸರ್ಕಾರ ಇದ್ದ ಅವಧಿಯಲ್ಲಿ ಎಷÀ್ಟು ಪ್ರೌಢಶಾಲೆ,ಪಿಯು,ಪದವಿ,ಮೆಡಿಕಲ್ ಕಾಲೇಜು ಮಾಡಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಯ್ತು. ರೇವಣ್ಣ ವಿದ್ಯುತ್ ಮಂತ್ರಿಯಾಗಿದ್ದಾಗ ಹೋಬಳಿಗೆ ಮೂರರಂತೆ ಸಬ್‍ಸ್ಟೇಶನ್ ನಿರ್ಮಾಣ ಮಾಡಲಾಯಿತು. ಇವೆಲ್ಲ ಕೊಡುಗೆ ಅಲ್ವಾ ಸ್ವಾಮಿ. ಎಸೆಂಕೃಷ್ಣ ಪ್ರಾರಂಭಿಸಿದ್ದ ಮೈಸೂರು-ಬೆಂಗಳೂರು ರಸ್ತೆಯನ್ನು 8 ದೇವೇಗೌಡರು ಪೂರ್ಣಗೊಳಿಸಿದರು. ಹೇಮಾವತಿಯ ನೀರು ತಂದುಕೊಟ್ಟವರು ಯಾರು? ದೇವೇಗೌಡ ಕುಮಾರಣ್ಣನ ಕೊಡುಗೆ ಬಗ್ಗೆ ಚರ್ಚೆ ಮಾಡ್ತೀರಾ? ನಿಮ್ಮನ್ನ ಈ ಮಟ್ಟಕ್ಕೆ ದೇವೇಗೌಡರು ನೀವೆಲ್ಲ ಜಿಲ್ಲೆಯಲ್ಲಿ ಕಾರಣ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಗಳಾಗಿ, ಲೋಕಸಭಾ ಸದಸ್ಯರಾಗಿ ಕರ್ತವ್ಯ ನಿರ್ವಹಿಸಲು ದೇವೇಗೌಡರ ಕುಟುಂಬ ಆಶೀರ್ವಾದ ಇದೆ ಎಂಬುದನ್ನು ಮರೆಯಬೇಡಿ ಎಂದು ಕುಟುಕಿದರು.
ಕೆರಗೋಡು ಗಲಭೆಗೆ ಶಾಸಕರೇ ಮೂಲ ಕಾರಣಕೆರಗೋಡಿನಲ್ಲಿ ಧ್ವಜ ಸ್ತಂಭದ ವಿಚಾರವಾಗಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಲು ಮೂಲ ಕಾರಣ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ರವಿಕುಮಾರ್ ಗಣಿಗ ಅವರೇ ಕಾರಣ.
ಈ ಧ್ವಜಸ್ತಂಭವನ್ನು ಮಾಡಬೇಕು ಎಂದು ಶಾಸಕರು ಸ್ಥಳ ಪರಿಶೀಲನೆ ಮಾಡಿ ನಾನೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತೇನೆ ಎಂದು ವಾಗ್ದಾನವನ್ನು ಕೊಟ್ಟಿರುವುದಕ್ಕೆ ಗ್ರಾಮಸ್ಥರೇ ಸಾಕ್ಷಿ. ಕುಮಾರಸ್ವಾಮಿಯವರು ಬಾರದ ಕಾರಣ ಆರೋಹಣಗೊಂಡಿದ್ದ ಧ್ವಜ ಸ್ತಂಭಕ್ಕೆ ನಾವೇ ಪೂಜೆ ಮಾಡಿ ತೆರಳಿದೆವು. ನಮ್ಮನ್ನು ಬಿಟ್ಟು ಮಾಡಿದ್ದಾರಲ್ಲ ಎಂಬ ಕಾರಣಕ್ಕೆ ಸಲ್ಲದ ರೀತಿಯಲ್ಲಿ ಹೇಳಿಕೆ ಕೊಟ್ಟು ಪರಿಸ್ಥಿತಿ ಉದ್ಭವಕ್ಕೆ ಮೂಲಕಾರಣರಾಗಿದ್ದಾರೆ. ನಂತರ 25 ರವರೆಗೆ ಹನುಮ ಧ್ವಜ ಹಾರಿಸಿ 26 ರಂದು ಧ್ವಜಾರೋಹಣ ಮಾಡಿ ನಂತರ ಮತ್ತೆ ಹನುಮಧ್ವಜ ಹಾರಿಸಿದ್ದನ್ನು ಸಹಿಸಿಕೊಳ್ಳಲು ಆಗದೆ ಧ್ವಜ ತೆಗೆಸುವ ಪ್ರಕ್ರಿಯೆ ಪ್ರಾರಂಭಿಸಿದರು. ಶಾಸಕರು ಮತ್ತು ಜಿಲ್ಲಾ ಮಂತ್ರಿಗಳು ನೀವು ಗ್ರಾಮ ಪಂಚಾಯಿತಿಯಿಂದ ದೆಹಲಿಯವರೆಗೆ ಸರ್ಕಾರ ಇದ್ದಂತ ಯಾವುದೇ ಇಂತಹ ಏಕಾಗ್ರ ಘಟನೆಗಳನ್ನು ನಡೆದಿರಲಿಲ್ಲ ವ್ಯಾಪಿಸಲು ಇಚ್ಚಿಸುತ್ತೇನೆ.
ಸಮಸ್ಯೆ ಉದ್ಭವವಾಗಿ 5 ದಿನಗಳ ಕಾಲ ಬಾವುಟ ಹಾರಿದಾಗ ನೀವು ಮತ್ತು ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸದೇ ಏಕಾಏಕಿ ಪೊಲೀಸರನ್ನು ಕರೆಸಿ ಧ್ವಜ ಇಳಿಸಿದ್ದೀರಿ. ಪ್ರೋಟೋಕಾಲ್ ಮೀರಿ ರಾಷ್ಟ್ರಧ್ವಜ ಹಾರಿಸಿದ್ದೀರಿ. ಸಮಸ್ಯೆಯನ್ನು ಕಿಂಚಿತ್ತಾದರೂ ಬಗೆಹರಿಸಬೇಕು ಎಂಬ ಜವಾಬ್ದಾರಿ ನಿಮಗೆ ಇರಲಿಲ್ಲ ಮೊದಲು ನಿಮ್ಮ ಜವಾಬ್ದಾರಿ ಏನೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಆರ್‍ಪೇಟೆ ಶಾಸಕ ಹೆಚ್.ಟಿ.ಮಂಜು,ಮಾಜಿ ಶಾಸಕರಾದ ಡಾ.ಕೆ. ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮುಖಂಡ ಬಿ.ಆರ್.ರಾಮಚಂದ್ರ ಹಾಜರಿದ್ದರು.