ಚಲಿಸುತ್ತಿರುವ ರೈಲಿಗೆ ಬಿದ್ದು ಯುವಕ ಆತ್ಮಹತ್ಯೆ

ವಿಜಯಪುರ:ಮಾ.23:ಚಲಿಸುತ್ತಿದ್ದ ರೈಲಿಗೆ ಬಿದ್ದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ
ವಿಜಯಪುರ ನಗರದ ಇಬ್ರಾಹಿಂಪೂರ ಬಳಿ ಸಂಭವಿಸಿದೆ.
ಇಬ್ರಾಹಿಂರೋಜಾ ರಸ್ತೆ ನಾವದಗಿ ಪ್ಲಾಟ್ ಬಡಾವಣೆ ನಿವಾಸಿ ಖಾಲಿದ ಮಹ್ಮದ ಅಲಿ ಮುಲ್ಲಾ (24) ಆತ್ಮಹತ್ಯೆಗೀಡಾದ ಯುವಕ.
ವೈಯಕ್ತಿಕ ಕಾರಣಕ್ಕೆ ಮನ ನೊಂದು ಚಲಿಸುತ್ತಿರುವ ರೈಲಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈಲಿನಡಿ ಸಿಲುಕಿ ಯವಕನ ದೇಹ ಹಳಿಗಳಲ್ಲಿ ರಕ್ತಸಿಕ್ತವಾಗಿ ಛಿದ್ರಛಿದ್ರವಾಗಿ ದೂರದವರೆಗೆ ಬಿದ್ದಿತ್ತು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ರೆಲ್ವೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.