ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಸಾವು

ರಾಯಚೂರು.ಅ.೧೭- ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ರಾಯಚೂರು ಹೊರ ವಲಯದ ಯರಮರಸ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರಾಯಚೂರಿನ ಯರಮರಸ್ ಹೊರ ವಲಯದಲ್ಲಿ ಇರುವಂತಹ ರೈಲು ನಿಲ್ದಾಣದ ಸ್ವಲ್ಪ ಮುಂದೆ ಘಟನೆ ನಡೆದಿದ್ದು. ಕೊಳೆತ ಸ್ಥಿತಿಯಲ್ಲಿ ದೇಹ ಸಿಕ್ಕಿದೆ. ಘಟನಯು ಎರಡ್ಮೂರು ದಿನಗಳ ಹಿಂದೆ ನಡೆದಿದೆ ಎನ್ನಲಾಗುತ್ತಿದೆ. ದೇಹವೆಲ್ಲ ಕೊಳೆಯುವ ಹಂತಕ್ಕೆ ತಲುಪಿದೆ. ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ರೈಲ್ವೆ ಪಿಎಸ್‌ಐ ವೀರಭದ್ರ ಎಚ್.ಎಸ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಸ್ಥಳದಲ್ಲಿ ಕೆಲವೊಂದು ಸಿಮ್ ಕಾರ್ಡ್ ಗಳು, ಮೊಬೈಲ್ , ನೂರು ರೂ. ಮುಖಬೆಲೆ ಒಂದಷ್ಟು ನೋಟುಗಳು, ಗುರುತಿನ ಚೀಟಿ ಸಿಕ್ಕಿದೆ.
ಗುರುತಿನ ಚೀಟಿಯಲ್ಲಿ ಮಹಾರಾಷ್ಟ್ರ ಮೂಲದ ಸನೋಜ್ ಕುಮಾರ್ ಎಂದಿದೆ. ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.