ಚಲಿಸುತ್ತಿದ್ದ ಬಸ್‍ನಿಂದ ಕಳಚಿದಗಾಲಿ ಕರ್ತವ್ಯ ಪ್ರಜ್ಞೆ ಮೆರೆದ ಚಾಲಕ

ಕೊಟ್ಟೂರು ಸೆ 16 :ಚಲಿಸುತ್ತಿದ್ದ ಕೆಎಸ್.ಆರ್.ಟಿಸಿಬಸ್‍ನ ಗಾಲಿ ಇದ್ದಕ್ಕಿದ್ದಂತೆ ಕಳಚಿ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ ಘಟನೆ ಪಟ್ಟಣದ ಹೊರವಲಯ ಮಲ್ಲನಾಯಕನಹಳ್ಳಿ ಕ್ರಾಸ್ ಬಳಿ ಸಂಜೆ ನಡೆದಿದೆ.
ಚಾಲಕ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ದಾವಣಗೇರಿ ಡಿಪೂದ ಕೆಎ 17ಎಫ್ 1418 ಬಸ್ ಬಳ್ಳಾರಿ ಯಿಂದ ಕೊಟ್ಟೂರು ಮೂಲಕ ಹರಿಹರದ ಕಡೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಂತೆ ಬಸ್‍ನ ಹಿಂಬದಿಗಾಲಿ ಕಳಚಿ ಬಿದ್ದಿದೆ. ತಕ್ಷಣ ಚಾಲಕ ಬಸ್‍ನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.