ಚಲಿಸುತಿದ್ದ ಬಸ್ ಗೆ ಬೆಂಕಿ ತಪ್ಪಿದ ದುರಂತ

ಮಂಡ್ಯ,ಏ.೨೩-ಜಿಲ್ಲೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ವೊಂದು ಏಕಾಏಕಿ ನಡುರಸ್ತೆಯಲ್ಲೇ ಹೊತ್ತಿ ಉರಿದು, ದೃಷ್ಟಷ್ಟವಶಾತ್ ಭಾರೀ ದುರಂತ ಘಟನೆ ಗಣಂಗೂರು ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮದುವೆ ಹಿನ್ನಲೆಯಲ್ಲಿ ಬೆಂಗಳೂರಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬಸ್?ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬಸ್? ಶಾರ್ಟ್? ಸರ್ಕ್ಯೂಟ್? ಆದ ಪರಿಣಾಮ ಬಸ್? ಸಂರ್ಫೂರ್ಣ ಬೆಂಕಿಗೆ ಆಹುತಿಯಾಗಿದೆ. ಬಸ್? ಸಂಚಾರದ ವೇಳೆ ಹೊಗೆ ಬರುತ್ತಿದ್ದಂತೆ ಚಾಲಕನಿಗೆ ಬಸ್ ನಿಲ್ಲಿಸುವಂತೆ ಪ್ರಯಾಣಿಕರು ಸೂಚಿಸಿದ್ದಾರೆ. ಬಳಿಕ ಬಸ್? ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ.
ಬಸ್ ನಿಂದ ಕೆಳಗೆ ಇಳಿಯುತ್ತಂತೆ ಮತ್ತಷ್ಟು ಬೆಂಕಿ ಆವರಿಸಿದೆ. ಕ್ಷಣಾರ್ಧದಲ್ಲಿ ಬಸ್? ಸುಟ್ಟು ಕರಕಲಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅಷ್ಟರಲ್ಲಾಗಲೇ ಭಾಗಶಃ ಬಸ್? ಸುಟ್ಟುಕರಕಲಾಗಿದೆ.
ಬಸ್?ನಲ್ಲಿ ಮೂವತ್ತಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಬಸ್?ನಲ್ಲಿ ಹೊಗೆ ಕಾಣಿಸಿಕೊಂಡತೆ ಬಸ್? ಅನ್ನು ನಿಲ್ಲಿಸಲಾಗಿದೆ. ಈ ಘಟನೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ .
ಘಟನೆ ನಡೆದ ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಧಾವಿಸಿ ಬೆಂಕಿ ನಂದಿಸಿದ್ದಾರೆ.