ಚಲವಿದ್ದರೆ ಸಾಧನೆ ಮಾಡಲು ಸಾಧ್ಯ -ಚುಕ್ಕಿ ಸೂಗಪ್ಪ


ರಾಯಚೂರು.ನ.22- ಚಲವೊಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು, ಇದಕ್ಕೆ ಈ ಮೂರು ಜನ ಸಾಕ್ಷಿಯಾಗಿದ್ದಾರೆ ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ಹೇಳಿದರು.
ಅವರಿಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸನ್ಮಾನ ಮತ್ತು ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು, ಜಿಲ್ಲೆಯಲ್ಲಿ ಇತಿಹಾಸ ನೋಡಿದರೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕರು ಕೃಷಿ ಮಾಡಿದ್ದಾರೆ. ಶಾಂತರಸ ಅವರಿಂದ ಇಡಿದು ಚಿದಾನಂದ ಸಾಲಿ ವರೆಗೆ ಅನೇಕರು ಜಿಲ್ಲೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಗುರುತ್ತಿಸಿ ಅವರೂ ಬೆಳೆದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಅನೇಕ ಸಾಹಿತಿಗಾರರು, ಕವಿಗಳು , ಕತೆಗಾರರು ಕೊಟ್ಟ ಜಿಲ್ಲೆಯಾಗಿದೆ. ಬೆಂಗಳೂರು ಮತ್ತು ಮೈಸೂರು ಭಾಗದ ಜನರು ಮೂಗು ಹುಟ್ಟಿಕೊಂಡು ಜಿಲ್ಲಯನ್ನು ತಿರುಗಿ ನೋಡಬೇಕಾಗಿದೆ., ಜಿಲ್ಲೆಯಲ್ಲಿ ಭತ್ತ, ಚಿನ್ನ, ವಿದ್ಯುತ್ತನ್ನು ನಾಡಿಗೆ ಕೊಟ್ಟಂತ ಕೀರ್ತಿ ಅಪಾರವಾದದ್ದು, ಇದರ ಜೊತೆಗೆ ಸಾಹಿತ್ಯದ ಕೃಷಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಉಣಬಡಿಸಿದ್ದಾರೆ ಎಂದು ತಿಳಿಸಿದರು.
ಅಂಬಯ್ಯ ನುಲಿ ಅವರು ಕಳೆದ ೪೦ ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದಿದ್ದಾರೆ. ಅವರ ಮನೆತನವೇ ತಂಗೀತ ಕಚೇರಿಯಾಗಿಸಿಕೊಂಡು ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ಸಂಗೀತವನ್ನೆ ಉಣಬಡಿಸಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ ಎಂದರು.
ಚಿದಾನಂದ ಸಾಲಿ ಇವರು ಎಲೆಮರೆಕಾಯಿ ಯಂತೆ ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ಹಾಗೂ ವೀರ ಹನುಮಾನ ಅವರು, ಜಪಾನಿನ ಹೈಕು ಗಳನ್ನು ಕನ್ನಡಕ್ಕೆ ತಂದಿದ ಕೀರ್ತಿ ಇವರಿಗೆ ತಂದಿದೆ, ಜಿಲ್ಲಾ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಜೆ.ಎಲ್.ಈರಣ್ಣ ಪ್ರಾಸ್ಥಾವಿಕವಾಗಿ ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಇಲ್ಲಿಯವರೆಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾಗು ಯುವ ಕವಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ
ಕತೆ ಕಮ್ಮಟ, ಕಾವ್ಯ ಕಮ್ಮಟ ಕಾರ್ಯಕ್ರಮ ನಡೆಸಲಾಗಿದೆ. ಅಂಬಯ್ಯ ನುಲಿ, ಚಿದಾನಂದ ಸಾಲಿ, ವೀರ ಹನುಮಾನ ಅವರು ಸಾಹಿತ್ಯ ಪರಿಷತ್ತಿನ ಕೃಷಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಇವರ ಅನೇಕ ಲೇಖನಗಳಿಗೆ, ಕೃತಿಗಳಿಗೆ ಹಲವಾರು ಪ್ರಶಸ್ತಿ ಗಳು ಸಿಕ್ಕಿವೆ ಎಂದರು.
ಈ ವೇಳೆ ಅಂಬಯ್ಯ ನುಲಿ, ಚಿದಾನಂದ ಸಾಲಿ, ಮತ್ತು ವೀರ ಹನುಮಾನ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆ.ಎಲ್.ಈರಣ್ಣ, ಕಸಾಪ ಅಧ್ಯಕ್ಷ, ಬಸವಪ್ರಭು ಪಾಟೀಲ್ ಬೆಟ್ಡದೂರು,
ಭೀಮನಗೌಡ ಇಟಗಿ, ಅಂಬಯ್ಯ ನುಲಿ, ವೀರ ಹನುಮಾನ, ಚುಕ್ಕಿ ಡಾ.ರಾಜೇಶ್ವರಿ, ಚಿದಾನಂದ ಸಾಲಿ,ಡಾ.ಸಗರದ್,ಅನಂದಸ್ವಾಮಿ, ಬಿಮೋಜಿ ರಾವ್, ಸೇರಿದಂತೆ ಅನೇಕರು ಕವಿಗಳು ಇದ್ದರು.