ಚಲವಾದಿ ನಾರಾಯಣ ಸ್ವಾಮಿಗೆ ಸನ್ಮಾನ

ಕಾರಟಗಿ:ಏ:08: ಇಂದು ಬಿಜೆಪಿ ರಾಜ್ಯ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಚಲವಾದಿ ನಾರಾಯಣಸ್ವಾಮಿಯವರು ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರಚಾರ ಕಾರ್ಯನಿಮಿತ್ತವಾಗಿ ಮಾರ್ಗಮಧ್ಯದಲ್ಲಿ ಕಾರಟಗಿಯ ಬಿಜೆಪಿ ಕಾರ್ಯಕರ್ತರು ಎಸ್ಸಿ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಸನ್ಮಾನಿಸಿದರು, ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಿಗೆ ಬಿಜೆಪಿ ಕಾರ್ಯಕರ್ತರು ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಸನ್ಮಾನಿಸಿದರು.
ನಂತರ ಸನ್ಮಾನ ಸ್ವೀಕರಿಸ ಮಾಡನಾಡಿದ ಚಲವಾದಿ ನಾರಾಯಣಸ್ವಾಮಿರವರು ಅತಿ ಶೀಘ್ರದಲ್ಲಿ ಕಾರಟಗಿಯ ಎಸ್ಸಿ ಮೋರ್ಚಾದ ಎಲ್ಲಾ ಪದಾಧಿಕಾರಿಗಳನ್ನು ಭೇಟಿಯಾಗಿ ಸಂಘಟನೆ ಮಾಡುವುದರ ಬಗ್ಗೆ ಹಾಗೂ ಬಿಜೆಪಿಯ ಸಾಧನೆಗಳ ಬಗ್ಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ಸಣ್ಣ ಕನಕಪ್ಪ ಕಾರಟಗಿ ಮಂಡಲದ ಎಸ್ಸಿ ಮೋರ್ಚಾದ ಅಧ್ಯಕ್ಷ ಜಮದಗ್ನಿ ಚೌಡಕಿ ಕಾರ್ಯದರ್ಶಿ ಮೌನೇಶ್ ಟೆಂಗುಂಟಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಸ್ಕಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ರಾಘವೇಂದ್ರ ಬೋವಿ. ಯಮನೂರ್ ಬಸವಣ್ಣ ಕ್ಯಾಂಪ್. ಪ್ರದೀಪ್ ತೊಂಡಿಹಾಳ. ನಾಗರಾಜ್ ವಾಲಿಕರ್. ಶಶಿ ಮೇದಾರ್. ಹುಸೇನ್ ಇಂದಿರಾನಗರ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರಾದ ಆಂಜನೇಯ ಹಾಗೂ ಇತರ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು,