ಚಲನಚಿತ್ರ ವಾಣಿಜ್ಯ ಮಂಡಳಿಗೆ ೯೦ರ ಸಂಭ್ರಮ

ಬೆಂಗಳೂರು, ಮಾ.೪- ಕನ್ನಡ ಚಿತ್ರರಂಗಕ್ಕೆ ಈಗ ೯೦ರ ಹರೆಯ. ಈ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ೯೦ ವರ್ಷದ ಕನ್ನಡ ಚಿತ್ರರಂಗದ ಸಿನಿಮಾ ಯಾನ ಸಂಭ್ರಮಿಸಲು ಮುಂದಾಗಿದೆ.
೧೯೩೪ ಮಾರ್ಚ್ ೩ ರಂದು ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಬಿಡುಗಡೆಯಾಗಿ ಅರು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮುನ್ನುಡಿ ಬರೆದಿತ್ತು. ದಿನವನ್ನು ಕನ್ನಡ ಚಿತ್ರರಂಗದ ಸಂಸ್ಫಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಕನ್ನಡ ಚಲನ ಚಿತ್ರರಂಗ ತೊಂಬತ್ತು ದಶಕಗಳ ಈ ಸಂಭ್ರಮಾಚರಣೆಯನ್ನು “ಸಿನಿ ೯೦” ಹೆಸರಿನಲ್ಲಿ ಇದೇ ಆಗಸ್ಟ್ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಲು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಲಾಂಛನವನ್ನು ಬಿಡುಗಡೆ ಮಾಡಿದೆ. ಗಿರಿಜಾ ಲೋಕೇಶ್, ಹಿರಿಯ ನಟ ಶ್ರೀನಾಥ್, ಉಮಾಶ್ರೀ, ಸಾಯಿಪ್ರಕಾಶ್, ಜೋಸೈಮನ್, ಸಾ.ರಾ.ಗೋವಿಂದು, ಪ್ರದರ್ಶಕರ ಸಂಘದ ಕೆ.ವಿ.ಚಂದ್ರಶೇಖರ್, ಚಿನ್ನೇಗೌಡ್ರು, ಥಾಮಸ್ ಡಿಸೋಜಾ, ಎನ್ನಾರ್ ಕೆ.ವಿಶ್ವನಾಥ್ ಸೇರಿದಂತೆ ಚಿತ್ರೋದ್ಯಮದ ಹಲವಾರು ಗಣ್ಯರುಗಳು ಹಾಜರಿದ್ದರು.
ಜೊತೆಗೆ ಕನ್ನಡ ಚಿತ್ರರಂಗದ ಎಲ್ಲಾ ವಿಭಾಗದ ಸದಸ್ಯರುಗಳು, ಕಲಾವಿದ ತಂತ್ರಜ್ಞರುಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಾಣಿಜ್ಯ ಮಂಡಳಿ ಯೂ ಟ್ಯೂಬ್ ಚಾನೆಲ್ ನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ. ಸುರೇಶ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಎನ್. ಎಂ. ಸುರೇರ್ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಬೇಕಾಗಿತ್ತು. ಕಾರಣಾಂತರಗಳಿಂದ ಆಗಿಲ್ಲ. ಅಗಸ್ಟ್ ತಿಂಗಳಲ್ಲಿ ಸಿನಿ ೯೦ ಸಂಭ್ರಮದ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಆಗ ಕನ್ನಡ ಚಿತ್ರರಂಗದ ಪ್ರತಿಯೊಬ್ಬರೂ ಫಾಲ್ಗೊಳ್ಳಲಿದ್ದಾರೆಎಂದರು.ಹಿರಿಯ ನಟಿ ಜಯಮಾಲಾ ಮಾತನಾಡಿ ಚಿತ್ರರಂಗದ ಎಲ್ಲ ಅಂಗಸಂಸ್ಥೆಗಳ ಪರಿಶ್ರಮದಿಂದ ಚಿತ್ರರಂಗ ಈ ಮಟ್ಟಕ್ಕೆ ಬೆಳೆದಿದೆ. ಅದನ್ನು ನಾವೆಲ್ಲ ಸೇರಿ ಮುಂದುವರೆಸಿಕೊಂಡು ಹೋಗಬೇಕು. ಶತಮಾನೋತ್ಸವದ ವೇಳೆಗೆ ನಾವೆಲ್ಲ ಇರ್ತೇವೋ ಇಲ್ಲವೋ ಗೊತ್ತಿಲ್ಲ, ಈಗ ಬಂದಿರುವ ತೊಂಬತ್ತರ ಸಡಗರವನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಮನವಿ ಮಾಡಿದರು. ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾತನಾಡಿ ಚಿತ್ರರಂಗ ಬೆಳೆಸಿದ ಮಹನೀಯರನ್ನು ಸ್ಮರಿಸುವ ದಿನ, ವಾಣಿಜ್ಯ ಮಂಡಳಿ ಈ ೯೦ರ ಸಡಗರವನ್ನು ಮುಂದಿನ ಪೀಳಿಗೆಗೆ ನೆನಪಾಗಿ ಉಳಿಯುವಂತೆ ಮಾಡಲುಹೊರಟಿದೆ ಎಂದರು.
ಮಾಜಿ ಮಾಜಿ ಅಧ್ಯಕ್ಷ, ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಮಾತನಾಡಿ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಹೇಳಿದರು.ಕನ್ನಡ ಚಿತ್ರರಂಗಕ್ಕೆ ೯೦ ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ರೀತಿಯಲ್ಲಿ ವಾಣಿಜ್ಯ ಮಂಡಳಿ ತಯಾರಾಗುತ್ತಿದೆ.ಸಿನಿ ೯೦ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಕಾರ್ಯಕ್ರಮ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಪ್ರಯಣ ರಾಜ ಶ್ರೀನಾಥ್, ನಟ ಜಗ್ಗೇಶ್ ಸೇರಿದಂತೆ ಅನೇಕ ನಟ,ನಟಿಯರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ತಂತ್ರಜ್ಞರು ಭಾಗವಹಿಸಿದ್ದರು.