ಚಲನಚಿತ್ರ ಕಾರ್ಮಿಕರನ್ನೆ ಮರೆತ ಸರ್ಕಾರ ಅಸಮಾಧಾನ ಹೊರಹಾಕಿದ ಸಿಬ್ಬಂದಿ

ಚಿತ್ರದುರ್ಗ.ಮೇ.೨೧: ಕರ್ನಾಟಕ ರಾಜ್ಯಾಧ್ಯಂತ ಸರ್ಕಾರ ಈಗ ಲಾಕ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಅನೇಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಪರಹಾರ ಘೋಷಣೆ ಮಾಡಿದೆ. ಆದರೆ ಚಲನಚಿತ್ರ ಮಂದಿರಗಳಲ್ಲೆ ಕೆಲಸ ಮಾಡುವ ಕಾರ್ಮಿಕ ವರ್ಗವನ್ನು ಸಂಪೂರ್ಣ ಕಡೆಗಣಿಸಿದ್ದು ತುಂಬಾ ನೋವಿನ ಸಂಗತಿ.
 ಚಿತ್ರದುರ್ಗ ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಳು ಸ್ಥಗಿತಗೊಂಡಿವೆ. ಕಳೆದ ಬಾರಿಯೂ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಚಿತ್ರಮಂದಿರ ಕಾರ್ಮಿಕರನ್ನು ಗುರುತಿಸುವ ಕಾರ್ಯವಾಗಬೇಕಾಗಿದೆ ಮತ್ತು ಅನೇಕರು ದುಡಿಮೆ ಇಲ್ಲದೆ ಮನೆಯಲ್ಲಿ ಕೂರಬೇಕಾಗಿದೆ ಹಾಗಾಗಿ ಕಾರ್ಮಿಕರಿಗೆ ತುತ್ತು ಅನ್ನಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಮತ್ತು ಆರ್ಥಿಕವಾಗಿ ಸಹಾಯ ಮಾಡ ಬೇಕಾಗಿದೆ ಎಂದು ಚಲನಚಿತ್ರ ಕಾರ್ಮಿಕರ ಮತ್ತು ಪ್ರತಿನಿಧಿಗಳ ಹಿತರಕ್ಷಣಾ ಸಮಿತಿ ಪರವಾಗಿ ಸಿನಿಮಾ ಪಿಆರ್‌ಒ ಮಾಲತೇಶ್ ಅರಸ್ ಅವರು ಮನವಿ ಮಾಡಿದ್ದಾರೆ. ಇಂದು ಸಿನಿಮಾಗಳು ಹೀರೋಗಳ ಮೇಲೆ ನಿಂತಿವೆ. ಬೆಂಗಳೂರು ನಗರದಲ್ಲಾದರೇ ಯಾರಾದರೂ ನಟರೋ, ನಿರ್ದೇಶಕರು, ನಿರ್ಮಾಪಕರು ಸಹಾಯ ಮಾಡಬಹುದು ಆದರೆ ರಾಜ್ಯದಲ್ಲಿರುವ ಎಲ್ಲಾ ಚಿತ್ರಮಂದಿರದಲ್ಲಿ ಕೆಲಸ ಮಾಡುವ ಕಾರ್ಮಿಕರು, ಪ್ರತಿನಿಧಿಗಳು (ಆರ್.ಪಿ) ಮತ್ತು ಕೆಲವು ಪಿಆರ್‌ಓಗಳಿಗೆ ಕುಟುಂಬ ನಿರ್ವಹಣೆ ಮಾಡಲು ತುಂಬಾ ತೊಂದರೆಯಾಗಿರುತ್ತದೆ. ತಾವುಗಳು ಸರ್ಕಾರದ ಪರವಾಗಿ ಆರ್ಥಿಕವಾಗಿ ಮತ್ತು ಆಹಾರ ಪದಾರ್ಥಗಳ ನೆರವು ನೀಡಬೇಕಾಗಿದೆ ಈ ಬಗ್ಗೆ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಸೂಚಿಸಿ ಅಗತ್ಯ ಸಹಕಾರ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಕಳೆದ ವರ್ಷಗಳಿಂದ ಚಿತ್ರಮಂದಿರಗಳ ಸಿಬ್ಬಂದಿಗಳ ಸ್ಥಿತಿ ಹೇಳತೀರದಾಗಿದೆ. ಈ ಹಿಂದೆ ಲಾಕ್‌ಡೌನ್ ಆದ ಸಮಯದಲ್ಲಿ ಮನವಿ ನೀಡಿದ್ದರೂ ಯಾವುದೇ ಅನುಕೂಲವಾಗಿಲಿಲ್ಲ ದಯಮಾಡಿ ಈ ಬಾರಿಯಾದರೂ ಅನುಕೂಲ ಕಲ್ಪಿಸಬೇಕಾಗಿದೆ ಎಂದು ಚಲನಚಿತ್ರ ಕಾರ್ಮಿಕರ ಮತ್ತು ಪ್ರತಿನಿಧಿಗಳ ಹಿತರಕ್ಷಣಾ ಸಮಿತಿ ಪರವಾಗಿ ಮಾಲತೇಶ ಅರಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯಸರ್ಕಾರ ಕೋವಿಡ್ -19ರ ಎರಡನೇ ಅಲೆಯ ಸಂಕಷ್ಟದ ಸಮಯದಲ್ಲಿ ಅನಿವಾರ್ಯವಾದ ಲಾಕ್‌ಡೌನ್ ಸ್ಥಿತಿಯಿಂದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ ಪ್ಯಾಕೇಜ್ ಕೃಷಿಕರು, ಕ್ಷೌರಿಕರು, ಶ್ರಮಿಕರು, ಆಟೋ/ಟ್ಯಾಕ್ಸಿಚಾಲಕರು ಮತ್ತು ರಸ್ತೆ ಬದಿಯ ವ್ಯಾಪಾರಸ್ಥರು ಕಲಾವಿದರು, ಟೈರ‍್ಸ್ಗಳು ಹಾಗೂ ಅಸಂಘಟಿತಕಾರ್ಮಿಕ ವಲಯದವರಿಗೆ 1250 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದಆರ್ಥಿಕ ಪರಿಹಾರ ಘೋಷಿಸಿ ಜನರಲ್ಲಿ ಸ್ಥೆöÊರ್ಯ ಮೂಡಿಸಿದ್ದಾರೆ. ಆದರೆ ಸಿನಿಮಾ ಕಾರ್ಮಿಕರನ್ನು ಮರೆತಿರುವುದು ದುರಂತದ ಸಂಗತಿ.