ಚಲಗೇರ ದಲಿತರ ನಿವಾಸದಲ್ಲಿ ಜೆಡಿಎಸ್ ನಾಯಕಿ ವಾಲಿ ಸಹಭೋಜನ ವಾಸ್ತವ್ಯ

ಆಳಂದ:ನ.12: ಗ್ರಾಮ ವಾಸ್ತವ್ಯ ಮನೆ ಮನೆಗೆ ಪಾದಯಾತ್ರೆ ಆರಂಭಿಸಿರುವ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ಅವರು ತಾಲೂಕಿನ ಚಲಗೇರಾ ಗ್ರಾಮದಲ್ಲಿ ಪ್ರತಿ ಮನೆ ಮನೆಗಳಿಗೆ ತೆರಳಿ ಪಕ್ಷದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು.
ಬಳಿಕ ಸಂಜೆ ಗ್ರಾಮದ ದಲಿತ ಬಾಡಾವಣೆಯ ನಿವಾಸಿಯೊಬ್ಬರ ನಿವಾಸದಲ್ಲಿ ಕುಟುಂಬಸ್ತರೊಂದಿಗೆ ಸಹಭೋಜನ ಕೈಗೊಂಡ ವಾಸ್ತವ್ಯ ಮಾಡಿದರು.
ಈ ಮೊದಲು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಾಗರಿಕರನ್ನು ಭೇಟಿ ಮಾಡಿದ ಅವರು, ಸಮಸ್ಯೆಗಳನ್ನು ಆಲಿಸಿ ಆಡಳಿತ ನಡೆಸುವ ಶಾಸಕರು ಮತ್ತು ಮಾಜಿ ಶಾಸಕರು ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಮಹಿಳಾ ಶೌಚಾಲ ಬಡವರಿಗೆ ಮನೆ ಒದಗಿಸಲು ಗುಣಮಟ್ಟದ ರಸ್ತೆ ನಿರ್ಮಾಣ ಆಗಿಲ್ಲ. ಬರುವ ದಿನಗಳಲ್ಲಿ ಜೆಡಿಎಸ್‍ಗೆ ಮತ ನೀಡಿದರೆ ಶಿಕ್ಷಣ, ಆರೋಗ್ಯ, ರೈತ ಚೈತನ್ಯ, ಯುವ ನವ ಹಾಗೂ ಮಹಿಳಾ ಸಬಲೀಕರಣ ಮತ್ತು ಬಡವರಿಗೆ ವಸತಿ ಆಸರೆ ಯೋಜನೆಗೆಳಂತ ಪಂಚರತ್ನ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಲಾಟ್ರಿ ಮತ್ತು ಸಾರಾಯಿ ನಿಷೇಧ, ಹೈಕೋರ್ಟ್ ಪೀಠ ಸ್ಥಾಪನೆ, ಶಾಲೆಯ ಹೆಣ್ಣುಮಕ್ಕಳಿಗೆ ಸೈಕಲ್ ಮತ್ತು ಮಧ್ಯಾಹ್ನದ ಬಿಸಿಯೂಟ ನೀಡಿದ್ದರು. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದಲ್ಲಿ ಕೃಷಿ ಲಾಭದಾಯಕ ಉದ್ದೇಶವಾಗಿಸಲು ಈ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದರು.
ಭಾಗ್ಯಲಕ್ಷ್ಮೀ ಯೋಜನೆ, ಸುಂಧ್ಯಾ ಸುರಕ್ಷಾ ಯೋಜನೆ ಅಡಿಯ 600ರಿಂದ 1000 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಉಚಿತವಾಗಿ ಗ್ಯಾಸ್ ನೀಡಿದ್ದು, ರೈತರ 25 ಸಾವಿರ ಕೋಟಿ ಬೆಳೆಸಾಲಮನ್ನಾ ಮಾಡಿದ್ದಾರೆ. ಇಂಥ ನಾಯಕರ ಸರ್ಕಾರ ಅಧಿಕಾರಕ್ಕೆ ತರಲು ಮತ್ತು ಚುನಾವಣೆಯಲ್ಲಿ ಎಂಎಲ್ ಸ್ಥಾನಕ್ಕೆ ನಾನು ಸ್ಪರ್ಧಿಸಲಿದ್ದು ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಭಾಕರ್ ರಾಮಚಂದ್ರ ಜನಾಬಾಯಿ ಗುಡೆದೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಶರಣ ಕುಲಕರ್ಣಿ, ವಿಜಯಕುಮಾರ ಮಂಜುಲ್ಕರ್, ಶ್ರೀಕಾಂತ ಸಕ್ಕರಗಿ. ಈರಣ್ಣ ಭಾಸಗಿ. ಗೈಬಿಶ್ ಸಿಂಘೆ ಕೆರೂರ್ ಮತ್ತಿತರರು ಉಪಸ್ಥಿತರಿದ್ದರು.