ಚರ್ಮರೋಗಕ್ಕೆ ಮನೆಮದ್ದು

೧. ಬಿಳಿ ಈರುಳ್ಳಿಯ ರಸಕ್ಕೆ ಅರಿಶಿನದ ಪುಡಿಯನ್ನು ಬೆರೆಸಿ ಕಜ್ಜಿ, ತುರಿಕೆ ಚರ್ಮ ಸಮಸ್ಯೆ ಇರುವ ಭಾಗಕ್ಕೆ ಲೇಪಿಸುವುದರಿಂದ ಚರ್ಮರೋಗಗಳು ಗುಣಮುಖವಾಗುತ್ತವೆ.
೨. ಕೊಬ್ಬರಿ ಎಣ್ಣೆಗೆ ಶುದ್ಧ ಅರಿಶಿನಪುಡಿ ಬೆರೆಸಿ ಅಂಗಾಂಗಗಳಿಗೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮರೋಗಗಳು ಬರುವುದಿಲ್ಲ.
೩. ಅರಿಶಿನ ಮತ್ತು ಕರಿಮೆಣಸಿನಪುಡಿ ಸಮಭಾಗ ತೆಗೆದುಕೊಂಡು ಎಳ್ಳೆಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ಚರ್ಮ ರೋಗಗಳು ಕಡಿಮೆ ಆಗುತ್ತದೆ.
೪. ಇಸುಬು: ಅರಿಶಿನದ ಕೊಂಬು, ಅಳಲೇಕಾಯಿ ಎರಡನ್ನೂ ಮಜ್ಜಿಗೆಯಲ್ಲಿ ಗಂಧದ ಕಲ್ಲಿನ ಮೇಲೆ ತೇಯ್ದು ಅದರ ಗಂಧವನ್ನು ಹಚ್ಚುತ್ತಾ ಬಂದರೆ, ಇಸುಬು ಕಡಿಮೆ ಆಗುತ್ತದೆ.
೫. ಗಾಯ, ಕುರುಗಳು: ಮೆಂತ್ಯದ ಸೊಪ್ಪಿನ ಪೋಲ್ಟೀಸ್ ಮಾಡಿ ಕುರುಗಳ ಮೇಲೆ ಕಟ್ಟಿದರೆ ಕುರು ಒಡೆದು ಕೀವು ಹೊರಗೆ ಬಂದು ಗಾಯ ಬೇಗ ಮಾಯುತ್ತದೆ.
೬. ಗಾಯಗಳಾಗಿದ್ದಾಗ ನಿಂಬೆರಸದಿಂದ ತೊಳೆದರೆ ಬಹಳ ಬೇಗ ಗುಣವಾಗುತ್ತದೆ. ರೋಗಾಣುಗಳನ್ನು ಪ್ರತಿಬಂಧಿಸುವ ಶಕ್ತಿ ನಿಂಬೆಹಣ್ಣಿಗೆ ಇದೆ.
೭. ನಿಂಬೆರಸಕ್ಕೆ ಕೊಬ್ಬರಿಎಣ್ಣೆ ಬೆರೆಸಿ ಮೈ-ಕೈಗೆಲ್ಲಾ ಹಚ್ಚುತ್ತಾ ಬಂದರೆ ಚರ್ಮವು ಕಾಂತಿಯುತವಾಗುತ್ತದೆ. ಚರ್ಮಕ್ಕೆ ಮೃದುತ್ವ ಬರುತ್ತದೆ.
೮. ಇಸುಬು ಗಜಕರ್ಣ: ಅರಿಶಿನ, ತುಳಸಿ ಎಲೆಗಳು, ಉಪ್ಪು, ನಿಂಬೆರಸ ಎಲ್ಲಾ ಸಮಪ್ರಮಾಣ ತೆಗೆದುಕೊಂಡು ನುಣ್ಣಗೆ ಅರೆದು ಹಚ್ಚುವುದರಿಂದ ಇಸುಬು ಗುಣಮುಖವಾಗುವುದು.
೯. ಕುರುಗಳಾಗಿರುವಾಗ ಸಿಹಿಗುಂಬಳದ ಎಲೆಯನ್ನು ಬಿಸಿಮಾಡಿ ಕಟ್ಟಿದರೆ ಕುರು ಒಡೆದು ಕೀವು ಹೊರಗೆ ಬರುತ್ತದೆ.
೧೦. ಇಸುಬು, ಕಜ್ಜಿ: ಸಿಹಿಗುಂಬಳದ ಎಲೆಯ ರಸವನ್ನು ಲೇಪಿಸುವುದರಿಂದ ಇಸುಬು ಕಡಿಮೆ ಆಗುತ್ತದೆ.
೧೧. ನುಗ್ಗೆಸೊಪ್ಪನ್ನು ಅರೆದು ರಸ ತೆಗೆದು ಸಮಪ್ರಮಾಣ ಎಳ್ಳೆಣ್ಣೆಗೆ ಬೆರೆಸಿ ಚೆನ್ನಾಗಿ ಕುದಿಸಿ, ನೀರಿನ ಅಂಶ ಹೋದಮೇಲೆ ಶೋಧಿಸಿಟ್ಟುಕೊಂಡು ನವೆ, ಹುಳಕಡಿ, ಮುಂತಾದ ಚರ್ಮರೋಗಗಳಿಗೆ ಲೇಪಿಸಿದರೆ ಚರ್ಮರೋಗ ಗುಣವಾಗುತ್ತದೆ.
೧೨ ಹುಳಕಡ್ಡಿ, ಗಜಕರ್ಣ: ಮೂಲಂಗಿ ಬೀಜವನ್ನು ಅರೆದು ಮೊಸರಿನಲ್ಲಿ ಕಲೆಸಿ ಹಚ್ಚುವುದರಿಂದ ನಿವಾರಣೆಯಾಗುತ್ತದೆ.
೧೩. ತುರಿಕೆ, ಹುಳಕಡ್ಡಿ, ಗಜಕರ್ಣ: ಹಾಗಲಕಾಯಿರಸ, ಬೇವಿನ ಎಲೆ ರಸ ಎರಡನ್ನೂ ಕೊಬ್ಬರಿ ಎಣ್ಣೆ ಜೊತೆ ಸೇರಿಸಿ, ಒಲೆ ಮೇಲಿಟ್ಟು ಸಣ್ಣ ಉರಿಯಲ್ಲಿ ಕುದಿಸಿ, ನೀರಿನ ಅಂಶ ಪೂರ್ಣವಾಗಿ ಇಂಗಿದ ನಂತರ ಶೋಧಿಸಿ, ಆರಿಸಿ, ಗಾಜಿನ ಸೀಸೆಗೆ ಹಾಕಿಟ್ಟುಕೊಂಡು ಲೇಪನ ಮಾಡಿದರೆ ಈ ರೀತಿ ಚರ್ಮದ ಸಮಸ್ಯೆಗೆ ಉಪಯೋಗವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.