ಚರ್ಚಾ ಸ್ಪರ್ಧೆ

ಧಾರವಾಡ, ಫೆ26: ದಿನಾಂಕ 21-02-2024 ರಂದು ಪರಮ ಪೂಜ್ಯ ಹುರಕಡ್ಲಿ ಅಜ್ಜನವರ ಸ್ಮರಣಾರ್ಥ ಚರ್ಚಾ ಸ್ಪರ್ಧೆಯ ವಿಷಯ “ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳು ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ” ಎಂಬ ವಿಷಯದ ಕುರಿತು ಅಂತರ್ ಮಹಾವಿದ್ಯಾಲಯ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮೊದಲ ಸ್ಥಾನವನ್ನು ಆರ್.ಎಲ್.ಕಾನೂನು ಮಹಾವಿದ್ಯಾಲಯ, ಬೆಳಗಾವಿ, ಎರಡನೇ ಸ್ಥಾನವನ್ನು ಜಿ.ಕೆ.ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿ ಮೂರನೇ ಸ್ಥಾನವನ್ನು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯ, ಬೆಳಗಾವಿ ಪಡೆದುಕೊಂಡವು. ಸಭೆಯಲ್ಲಿ ಪ್ರಾಚಾರ್ಯರಾದ ಡಾ.ಸವಿತಾ ಎಲ್. ಪಾಟೀಲ, ಡಾ.ಎಸ್.ಎಸ್.ಗಾಳಿಮಠ, ಶ್ರೀಮತಿ. ಪಿ.ಬಿ.ದಾನವಾಡೆ, ಕು.ಕೃತಿಕಾ ಸಿಂಗ್ ಇವರು ಉಪಸ್ಥಿತರಿದ್ದರು.