ಚರಕುಂಟೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.21: ಭಾರತೀಯ ಜನತಾ ಪಕ್ಷ ಬಳ್ಳಾರಿ ಗ್ರಾಮಾಂತರ ಮಂಡಲದ ರೂಪನಗುಡಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ  ಬೂತ್ ಸಂಖ್ಯೆ 122 ಚರ್ರಕುಂಟೆ ಗ್ರಾಮದಲ್ಲಿ ಇಂದು ಬೂತ್ ವಿಜಯ ಸಂಕಲ್ಪ  ಅಭಿಯಾನದ  ಪ್ರಯುಕ್ತ ಮನೆ ಮನೆಗೆ  ಕರಪತ್ರ ಹಂಚುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಆರ್ ಮಲ್ಲಿಕಾರ್ಜುನಗೌಡ ಮಂಡಲ ಪ್ರಧಾನ ಕಾರ್ಯದರ್ಶಿ ಜೋಳದರಾಶಿ ಸಿ ಲೋಕೇಶ್ ರೆಡ್ಡಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕೆ. ಸರಸ್ವತಿ. ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯು. ಪ್ರಕಾಶ್ ಶಕ್ತಿ ಕೇಂದ್ರ ಪ್ರಮುಖರಾದ ಬಸಪ್ಪ ಕೆ, ಶಾಂತ ಮೂರ್ತಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿ. ಹನುಮಂತರೆಡ್ಡಿ ಹಾಗೂ ಊರಿನ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು