ಚರಂಡಿ ಸ್ವಚ್ಚತೆಗೆ ಆಗ್ರಹಿಸಿ ಮಾದಿಹಳ್ಳಿಯಲ್ಲಿ ಪ್ರತಿಭಟನೆ

ಸಂಜೆವಾಣಿವಾರ್ತೆ

 ಹರಪನಹಳ್ಳಿ.ಮೇ.೨೧:ಗ್ರಾಮದಲ್ಲಿ ಚರಂಡಿ ಸ್ವಚ್ಛತೆಯಿಲ್ಲದೆ ದುರ್ವಾಸನೆಯಿಂದ ಕೂಡಿದ್ದು, ರೋಗಗಳಿಗೆ ಆಹ್ವಾನಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಮಾದಿಹಳ್ಳಿ ಗ್ರಾಮದ ಗ್ರಾಮಸ್ಥರು ಅಸ್ವಚ್ಚತೆಯಿಂದ ಕೂಡಿದ ಚರಂಡಿ‌ ಮುಂಭಾಗದಲ್ಲಿ ನಿಂತು ಪಂಚಾಯಿತಿ ವಿರುದ್ದ ಸ್ವಚ್ಚತೆಗೆ ಆಗ್ರಹಿಸಿದರು.ಈ ವೇಳೆ ಗ್ರಾಮದ ಯುವ ಮುಖಂಡ ಗೊಣೇಶ್ ಮಾತನಾಡಿ ಗ್ರಾಮದಲ್ಲಿನ ಚರಂಡಿಗಳು ಭರ್ತಿಯಾಗಿದ್ದು ಸೊಳ್ಳೆಗಳ ಹಾವಳಿಯಿಂದ  ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಿವಾಸಿಗಳು ವಾಸಮಾಡುವಂತಾಗಿದೆ.ಮಕ್ಕಳು ಆಟವಾಡುವಾಗ ತೆರೆದ  ಚರಂಡಿಯಲ್ಲಿ ಆಯತಪ್ಪಿ ಬೀಳುವ ಆತಂಕ ಪೋಷಕರಲ್ಲಿ ಎದುರಾಗಿದೆ.ಜಲಜೀವನ್ ಮಿಷನ್ ಪೈಪ್ ಲೈನ್ ನ ಅವೈಜ್ಞಾನಿಕ ಕಾಮಗಾರಿಯಿಂದ ಸಿಸಿ ರಸ್ತೆಗಳು ಹದಗೆಟ್ಟಿದ್ದು ಚರಂಡಿಯಲ್ಲಿ ಸಮರ್ಪಕ ನೀರು ಹರಿಯದೆ ಸ್ಥಗಿತವಾಗಿದೆ.ಈ ಬಗ್ಗೆ ಸ್ಥಳೀಯ  ಜನಪ್ರತಿನಿಧಿಗಳು ಹಾಗೂ ಗ್ರಾ.ಪಂ ಅಧಿಕಾರಿಗಳು ಇತ್ತಕಡೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ನಿವಾಸಿಗಳಾದ ಮಾತಂಗಿ  ಅಂಜಿನಪ್ಪ, ರೇಣುಕಮ್ಮ,ಬೂದಾಳ್ ಮಂಜಪ್ಪ,ಉಪೇಂದ್ರ,ಸೇರಿದಂತೆ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.