ಚರಂಡಿ ಸ್ವಚ್ಚಗೊಳಿಸುವ ವೇಳೆ ಮೃತಪಟ್ಟ ಕುಟುಂಬಕ್ಕೆ ಪರಿಹಾರ ವಿತರಣೆ

ಸಂಜೆವಾಣಿ ವಾರ್ತೆ

ಜಗಳೂರು.ಜು.೧೮ :- ಬಸವನಕೋಟೆ ಗ್ರಾಮದಲ್ಲಿ ಇತ್ತೀಚಿಗೆ ಚರಂಡಿ ಸ್ವಚ್ಚಗೊಳಿಸುವ ವೇಳೆ ಮೃತರಾದ ಎರಡು ಕುಟುಂಬದ ಮುಖ್ಯಸ್ಥರಿಗೆ  ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ನೀಡುವಂತ ಕೆಲಸ ನಾನು ಮಾಡುತ್ತೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ತಾಲೂಕಿನ ಬಸವಕೋಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ   ಚರಂಡಿ ಸ್ವಚ್ಚ ಮಾಡುವ ವೇಳೆ ನಿಧನರಾದ ಕಾರ್ಮಿಕರಿಗೆ ತಲಾ ಒಂದು ಲಕ್ಷ ರೂ ಮೊತ್ತದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.ಚರಂಡಿ ಸ್ವಚ್ಚ ಗೊಳಿಸುವಾಗ ಮೃತ ಪಟ್ಟ ಸತ್ಯಪ್ಪ ಹಾಗೂ ಮೈಲಪ್ಪ ಅವರ ಕುಟುಂಬಕ್ಕೆ ದುಖಃವನ್ನು ಸಹಿಸಿಕೊಳ್ಳುವಂತ ಶಕ್ತಿ ನೀಡಲಿ ಎಂದು ಸಾಂತ್ವಾನ ಹೇಳಿದರು. ಪ್ರತಿಯೊಬ್ಬರಿಗೆ  ಸಾವು ಬರುತ್ತದೆ. ಅಸಜ ಸಾವಿನಿಂದ  ಕುಟುಂಬದ ಮುಖ್ಯಸ್ಥರೆ ನಿಧನರಾದಗ ಆ ಕುಟುಂಬವು ಬೀದಿಗೆ ಬರುವಂತ ಸ್ಥಿತಿ ನಿರ್ಮಾಣವಾಗಲಿದೆ.ಇಂಥ ಘಟನೆಗಳು ನಡೆಯಬಾರದು. ನಡೆದು ಹೋಗಿದೆ ಹಾಗಾಗಿ ಗ್ರಾಮ ಪಂಚಾಯಿತಿ ವತಿಯಿಂದ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಲಾಗಿದೆ.ಸರಕಾರದ ಯೋಜನೆಗಳನ್ನು ತಲುಪಿಸುವಂತ ಕೆಲಸ ಮಾಡು ತ್ತೇನೆ ಈಗ ಕರ್ನಾಟಕ ರಾಜ್ಯ  ಸಫಾಯಿ ಕರ್ಮಚಾರಿ ಆಯೋಗದಿಂದ  ತಲಾ ಒಂದು ಲಕ್ಷ ರೂ ವಿತರಣೆ ಮಾಡಲಾಗಿದೆ.ಸಾರ್ವಜನಿಕರಿಗೆ ಸರಕಾರದ 5 ಗ್ಯಾರಂಟಿಗಳನ್ನು ಸರಕಾರ ನೀಡಿದೆ. ಎಲ್ಲಾರಿಗೂ ಇದರ ಸೌಲಭ್ಯ ದೊರೆಯುವಂತ ಕೆಲಸ ಮಾಡುತ್ತೇನೆ ಎಂದರು.ಸಿರಿಗೆರೆ ಶ್ರೀಗಳು ವಿದೇಶ ಪ್ರವಾಸ ಹಿನ್ನಲೆ ಮತ್ತು ಸಂಸದರು ಸಹ ದಹಲಿಗೆ ತೆರಳುತ್ತಿರುವುದರಿಂದ  ಇಬ್ಬರು ಸಹ ಕಾರ್ಯ ನಿಮಿತ್ತ ತೆರಳುತ್ತಿರುವುದರಿಂದ ಜುಲೈ 19 ರಂದು ಜಗಳೂರಿನಲ್ಲಿ ನಡೆಯುವ 57 ಕೆರೆಗಳಿಗೆ ನೀರು ತುಂಬಿಸುವ ಸಭೆಯನ್ನು ಸಭೆಯನ್ನು ಮುಂದೂಡಲಾಗಿದೆ ಶೀಘ್ರದಲ್ಲಿ ಮತ್ತೊಂದು ದಿನಾಂಕವನ್ನು ತಿಳಿಸಲಾಗುವುದು ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ ಘಟನೆ ನಡೆದ ನಂತರ ಹತ್ತು ಹಲವು ಭಾರಿ ಬೇಟಿ ನೀಡಲಾಗಿದೆ.  ಗ್ರಾಮ ಪಂಚಾಯಿತಿ  ವತಿಯಿಂದ ನೌಕರಿ ನೀಡಲಾಗುವ ಭರವಸೆ ನೀಡಲಾಗಿದೆ. ಸರ್ಕಾರದಿಂದ ಬರುವ ಸೌಲತ್ತುಗಳನ್ನು ನೀಡಲಾಗುವುದು ಎಂದರು.ಡಾ.ಬಿ.ಆರ್ ಅoಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ರಮೇಶ್ ಮಾತನಾಡಿ ಚರಂಡಿ ಸ್ವಚ್ಚ ಮಾಡುವ ವೇಳೆ ಸಜ ಸಾವಿನಿಂದ ನಿಧನರಾದರು. ಸರಕಾರದಿಂದ ಈಗಾಗಲೇ ಸೌಲಭ್ಯ ಕಲ್ಪಿಸಲಾಗಿದೆ ಸಫಾಯಿ ಕರ್ಮಚಾರಿಗಳ ನಿಗಮ ದಿಂದ ನಾವು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅನುದಾನ  ಮುಂಜೂರು ಮಾಡಿಸಲಾಯಿತು.ತಲಾ ಒಂದು ಲಕ್ಷ ರೂ.ಗಳ ನ್ನು ಶಾಸಕರ ಮೂಲಕ ವಿತರಿಸಲಾಗುತ್ತದೆ ಎಂದರು.ಈ ಸಂಧರ್ಭದಲ್ಲಿ ತಹಶೀಲ್ದಾರ್ ಸಂತೋಷ್‌ಕುಮಾರ್, ಇ.ಓ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜೋತಿಲಿಂಗಪ್ಪ, ಪಿಡಿಓ ಬಸವರಾಜಪ್ಪ, ಸಿಪಿಐ  ಸೋಮಶೇಖರ್‌ ಕೆಂಚರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮದ ಮುಖಂಡರು ಗಳಾದ ಬೀಮಪ್ಪ, ಪ್ರಕಾಶ್. ಮಹಮ್ಮದ್ ಗೌಸ್. ಪಲ್ಲಾಗಟ್ಟೆ ಶೇಖರಪ್ಪ.ಸೇರಿದಂತೆ ಮತ್ತಿತರರು ಹಾಜರಿದ್ದರು.