ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ತುಂಬಾ ನೀರು

ಸೇಡಂ,ಅ.29: ತಾಲೂಕಿನ ಕುಕ್ಕುಂದ ಗ್ರಾಮ್ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬೀರನಹಳ್ಳಿ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮೇಲಿನ ಮನೆಯವರ ನಳದ ನೀರು ಬರುತ್ತಿರುವುದರಿಂದ ರಸ್ತೆಯ ತುಂಬಾ ಹರಿದಾಡುತ್ತಿದ್ದು ಅಕ್ಕಪಕ್ಕದ ಮನೆಯವರು ಹಾಸಿ ಕಟ್ಟಿದ ಸ್ಥಳಗಳಲ್ಲಿ ನೀರು ನಿಂತಿದ್ದು, ಈ ದಾರಿಯಲ್ಲಿ ತಿರುಗಾಡುವವರು ಭಯದಲ್ಲೇ ತಿರುಗಾಡುತ್ತಿದ್ದು ಕೆಲವು ಬಾರಿ ಕಾಲು ಜಾರಿ ಬೀಳುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ತಿ ಕಾರ್ಯ ಮಾಡಬೇಕಾಗಿದೆ ಎಂದು ಗ್ರಾಮದ ಯುವಕರಾದ ಬಸವರಾಜ್ ರವರು ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.