ಚರಂಡಿ ಮಧ್ಯದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್: ಸಾರ್ವಜನಿಕರ ಆತಂಕ

ಚಿಟುಗುಪ್ಪ,ಮಾ.2-ತಾಲ್ಲೂಕಿನ ಮನ್ನಾ ಎಕ್ಕೇಳಿ ಗ್ರಾಮದಲ್ಲಿ ಮುಖ್ಯ ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಆದರೆ, ಪಕ್ಕದಲ್ಲಿ ಹಾಕಬೇಕಾದ ಕುಡಿಯುವ ನೀರಿನ ಪೈಪ್ ಲೈನ್ ಚರಂಡಿಯ ಮಧ್ಯದಲ್ಲಿ ಜೋಡಣೆ ಮಾಡಿರುವುದುರಿಂದ ಪೈಪ್‍ಲೈನ್ ನಲ್ಲಿ ಕುಲಸಿತ ನೀರು ಹೋಗುವ ಸಾಧ್ಯತೆಗಳಿವೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು ಗಮನಿಸುತ್ತಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ಸಾರ್ವಜನಿಕರ ಆರೋಗ್ಯ ಕುರಿತು ಕಳವಳ ವ್ಯಕ್ತಪಡಿಸಿದ ಹೆಸರು ಹೇಳಲು ಇಚ್ಛಿಸಿದ ಸಾರ್ವಜನಿಕರೊಬ್ಬರ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡುತ್ತ ಇತ್ತೀಚಿಗೆ ಗುರುಮಠಕಲ್ ತಾಲೂಕಿನ ಅನ್ಪುರ್ ಗ್ರಾಮದಲ್ಲಿ ಕುಲಸಿತ ನೀರು ಕುಡಿದು ಸಾವನ್ನಪ್ಪಿದ ಪ್ರಕರಣ ನಡೆದಿದೆ. ಆದ್ದರಿಂದ ಈಗಲಾದರೂ ಕ್ಷೇತ್ರದ ಶಾಸಕರಾದ ಬಂಡಪ್ಪ ಕಾಶಂಪುರ್ ಸಾರ್ವಜನಿಕ ಹಿತ ದೃಷ್ಟಿಯಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಚರಂಡಿ ಮಧ್ಯದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಜೋಡಣೆ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.