ಚರಂಡಿ ಪೈಪ್ ದುರಸ್ಥಿಗೆ ಆಗ್ರಹ

ಬಳ್ಳಾರಿ, ಜ.02: ಕಳೆದ ಎರೆಡು ವರ್ಷದಿಂದಲೂ ಹಾಳಾಗಿರುವ ಒಳಚರಂಡಿ ಪೈಪ್ ನ್ನು ದುರಸ್ಥಿಗೊಳಿಸದೇ ನಡುವೆ ರ್ಲಕ್ಷ ವಹಿಸಿರುವ ಪಾಲಿಕೆ ವಿರುದ್ದ ನಗರದ ವಡ್ಡರ ಬಂಡೆಯ ಇಲಾಹಿ ಬೀದಿಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿರುವ ಅಲ್ಲಿನ‌ ನಿವಾಸಿ ನಾಗರೀಕ ಹೋರಾಟ ಸಮಿತಿಯ ಪಂಪಾಪತಿ ಈ ಬಗ್ಗೆ ಅನೇಕ ಬಾರಿ ಪಾಲಿಕೆ ಗಮನಕ್ಕೆ ತಂದರೂ ದುರಸ್ಥಿ ಮಾಡಿಲ್ಲ. ಕೆಲ ದಿನಗಳಲ್ಲಿ ಸರಿಪಡಿಸದಿದ್ದರೆ ಪಾಲಿಕೆ ಮುಂದೆ ಧರಣಿ ನಡೆಸ ಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ.