ಚರಂಡಿ ನೀರು ತಡೆಗಟ್ಟಲು ಆಗ್ರಹಿಸಿ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.20: ಜಿಲ್ಲೆಯ ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಬರುವ ಯಲ್ಲಾಪುರ ಗ್ರಾಮದ ಚರಂಡಿ ನೀರನ್ನು ಸೂಗೂರು ಕಾಲುವೆಗೆ ಬಿಡುತ್ತಿರುವುದನ್ನು ತಡೆಗಟ್ಟಲು ಆಗ್ರಹಿಸಿ
ಇಂದು ಕುರುಗೋಡಿನಲ್ಲಿ ರೈತ ಸಂಘಟನೆ ಎ ಐ ಕೆ ಕೆ ಎಂ ಎಸ್ ವತಿಯಿಂದ  ಪುರಸಭೆ ಮುಂದೆ ಪ್ರತಿ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ  ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ  ಡಿಸ್ಟ್ರುಬೂಟ್ .7 ನ ಸೂಗೂರು ಕಾಲುವೆಯ ನೀರಿನಿಂದ ಹಲವಾರು ಹಳ್ಳಿಗಳ ರೈತರು ಬೆಳೆ ಬೆಳೆಯುತ್ತಾರೆ, ಅದರಿಂದ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ರೈತರು ಹೊಲ, ಗದ್ದೆಗಳಲ್ಲಿ ತಮ್ಮ ಕಾಯಕ ಮಾಡುವಾಗ ಈ ಕಾಲುವೆಯಿಂದ ಬರುವ ನೀರನ್ನೇ ಕುಡಿಯುತ್ತಾರೆ. ಎಲ್ಲಾ ಕೆಲಸಗಳಿಗೂ ಬಳಸುತ್ತಾರೆ.
ಈ ಪರಿಸ್ಥಿತಿ ಇರುವಾಗ ಇತ್ತೀಚೆಗೆ ಕೆಲವು ವರ್ಷಗಳಿಂದ ಕುರುಗೋಡು ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಯಲ್ಲಾಪುರ ಗ್ರಾಮದ ಚಂರಂಡಿ ನೀರನ್ನು ಈ ಕಾಲುವೆಗೆ ಬಿಡುತ್ತಿರುವುದು ಹೇಯ ಕಾರ್ಯವಾಗಿದೆ. ಜನರು ತಮ್ಮ ಕೆಲಸದ ಸಮಯದಲ್ಲಿ ಈ ಚರಂಡಿ ಮಿಶ್ರಿತ ನೀರನ್ನು ಸೇವಿಸಬೇಕು ಎಂಬ ವಿಷಯವೇ ಮಾನವ ಕುಲ ತಲೆತಗ್ಗಸುವಂತ್ತಾದ್ದಾಗಿದೆ.
ಈ ವಿಷಯದ ಬಗ್ಗೆ  ಹಿಂದೆ ಒಮ್ಮೆ  ರೈತರು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ರೀತಿಯ ಶಾಶ್ವತ ಪರಿಹಾರವನ್ನು  ತೆಗೆದುಕೊಂಡಿಲ್ಲ. ಈಗಲಾದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಈ ಚರಂಡಿ ನಿರನ್ನು ತಡೆಗಟ್ಟಿ, ಶಾಶ್ವತ ಪರಿಹಾರ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಬೆಳೆಸುವುದಾಗಿ ಹೇಳಿದರು.
 ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು, ರೈತ ಮುಖಂಡರಾದ ಪಂಪಾಪತಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಬಸವರರಾಜ, ಮಣಿಕಂಟ ರೈತರಾದ  ಮನೋಹರ ರೆಡ್ಡಿ, ಹೊನ್ನೂರಪ್ಪ, ಪಂಪನಗೌಡ, ಶಿವಪ್ಪ, ಜಡೆಪ್ಪ,  ಹನುಮಂತಪ್ಪ, ವ.ಹನುಮಂತ ಸೇರಿದಂತೆ ಇತರರು ಇದ್ದರು.