ಚರಂಡಿ ನಿರ್ಮಿಣಕ್ಕೆ ಆಗ್ರಹಿಸಿ ಹೊಸಹಳ್ಳಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.14 :- ತಾಲೂಕಿನ ಕಾನಾಹೊಸಹಳ್ಳಿ ಗ್ರಾಮದ 8ನೇ ವಾರ್ಡಿನ ಗಣೇಶನಗರದಲ್ಲಿ  ಸುಮಾರು ನೂರಕ್ಕೂ ಹೆಚ್ಚು ಮನೆಗಳಿದ್ದು ಚರಂಡಿ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಚರಂಡಿ ಮಾಡಿಕೊಡುವಂತೆ ಒತ್ತಾಯಿಸಿ ಎಂಟನೇ ವಾರ್ಡಿನ ಮಹಿಳೆಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಕಾನಾಹೊಸಹಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ಸೋಮವಾರಮುತ್ತಿಗೆ ಹಾಕಿ  ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್ ಮಾತನಾಡಿ ಕೊಳಚೆ ನೀರು ಚರಂಡಿ ಇಲ್ಲದೆ ರಸ್ತೆಯ ಮೇಲೆ ಹರಿದು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ ಹಲವು ಭಾರಿ ಗ್ರಾಮ ಪಂಚಾಯತಿಗೆ ಖುದ್ದಾಗಿ ಹೋಗಿ  ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಮತ್ತೊಬ್ಬ ಗ್ರಾಮ ಪಂಚಾಯತಿ ಸದಸ್ಯ ಮಕ್ಬಲ್ ಅಹಮ್ಮದ್ ಮಾತನಾಡಿ ಇದು ಕಳೆದ ಇಪ್ಪತ್ತು ವರ್ಷಗಳಿಂದ ಇದೇ ಸಮಸ್ಯೆ ಇದೆ ಹಲವು ವರ್ಷಗಳಿಂದ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಚರಂಡಿ ಮಾಡುವವರೆಗೂ ಪ್ರತಿಭಟನೆ ವಾಪಾಸು ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು                                                                                                                ಮನವೊಲಿಕೆ ಪ್ರತಿಭಟನೆ ವಾಪಸ್ಸು :-  ಪ್ರತಿಭಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪಿಎಸೈ ತಿಮ್ಮಣ್ಣ ಚಾಮನೂರು , ಗ್ರಾಪಂ  ಅದ್ಯಕ್ಷೆ ನೀಲಮ್ಮ ಬೊಮ್ಮಯ್ಯ    ಹಾಗೂ ತಾಪಂ ನ ಪ್ರಭಾರಿ ಸಹಾಯಕ ನಿರ್ದೇಶಕ  ಬೋರಯ್ಯ ಸ್ಥಳಕ್ಕೆ ಆಗಮಿಸಿ  ಕೂಡಲೆ ಚರಂಡಿ ನಿರ್ಮಿಸಲು ಕೂಡಲೇ ಕೆಲಸ ಶುರುಮಾಡಿ ಆದಷ್ಟು ಬೇಗನೆ ಕೆಲಸ ಮಾಡುವುದಾಗಿ ಭರವಸೆ ನೀಡಿ ಮನವೊಲಿಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಯನ್ನು ವಾಪಾಸು ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಬಾಗ್ಯಮ್ಮ, ಕವಿತ,  ಜಾನಕಮ್ಮ, ಬೋರಮ್ಮ, ವಿಷಾಲಮ್ಮ,ಮಾಯಮ್ಮ, ಪಾಹಿಮಾ, ಓಂಕಾರಮ್ಮ, ಗಂಗಮ್ಮ,  ನಳಿನ, ಗ್ರಾಪಂ ಸದಸ್ಯರಾದ   ಮಂಜಮ್ಮ,ಗ್ರಾಮದ ಸೂರ್ಯಪ್ರಕಾಶ್, ನಾಗಭೂಷಣ, ಜಾವೆದ್, ಮಲ್ಲಿಕ, ಓಬಳೇಶ, ಸೋಮಣ್ಣ, ಎಚ್,ಬಿ, ಸತೀಶ್, ಸೇರಿದಂತೆ ಇತರರಿದ್ದರು.