ಚರಂಡಿ ಕಾಮಗಾರಿ ಪರಿಶೀಲನೆ

ತಾಳಿಕೋಟೆ:ಜ.7: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಗರೋತ್ತಾನ ಹಂತ 4 ಪ್ಯಾಕೇಜ್ 2 ರಲ್ಲಿ ಕೈಗೊಳ್ಳಲಾಗುತ್ತಿರುವ ಚರಂಡಿ ಕಾಮಗಾರಿಯನ್ನು ಪುರಸಭೆಯ ಕಿರಿಯ ಅಭಿಯಂತರ ಶಂಕರಗೌಡ ಪಾಟೀಲ ಅವರು ಶುಕ್ರವಾರರಂದು ಪರಿಶೀಲನೆ ನಡೆಸಿದರು.

ನಗರೋತ್ತಾನ ಯೋಜನೆಯಡಿ ನಡೆಯುತ್ತಿರುವ ಈ ಚರಂಡಿ ಕಾಮಗಾರಿಯ ಜೊತೆಗೆ ಢಾಂಬರೀಕರಣ ಕಾಮಗಾರಿಯು ನಡೆಯಲಿದ್ದು ನಿತ್ಯ ಕೆಲಸ ನಡೆಯುವ ಸ್ಥಳದಲ್ಲಿ ನಿಂತು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಲಾಗುತ್ತಿದೆ ಸದ್ಯ ಚರಂಡಿ ಕಾಮಗಾರಿಯು ಮುಕ್ತಾಯ ಹಂತಕ್ಕೆ ಬಂದಿದೆ ಎಂದು ಪತ್ರಿಕೆಗೆ ಮಾಹಿತಿ ಒದಗಿಸಿದರು.

ಈ ಸಮಯದಲ್ಲಿ ಪುರಸಭೆ ಆರೋಗ್ಯ ನಿರಿಕ್ಷಕ ಶಿವಾನಂದ ಜುಮನಾಳ ಅವರು ಇದ್ದರು.