ಚರಂಡಿ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಡಿ.26: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ 09ನೇ ವಾರ್ಡಿನಲ್ಲಿರುವ ಶಿವರಂಜನಿ ಮೆಡಿಕಲ್ ಸ್ಟೋರ್ ಯಿಂದ ಪೇಟೆ ಬಸವೇಶ್ವರ ದೇವಸ್ಥಾನದ ವರೆಗೆ ಚರಂಡಿಯ ಕಾಮಗಾರಿಗೆ ಸ್ಥಗಿತ ಗೊಳಿಸಿ ಆದೇ ವಾರ್ಡ್ ನಲ್ಲಿರುವ ಅವಶ್ಯಕತೆ ಇರುವಲ್ಲಿ ಕಾಮಗಾರಿಯು ನಡೆಸುವಂತೆ ಸ್ಥಳೀಯರು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಜೆ.ಇ ಸುನಂದಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಪಂಚಪ್ಪ ಅವರು ಚರಂಡಿಯು ಸುವ್ಯವಸ್ಥೆ ಯಿಂದ ಕೂಡಿದ್ದು ಯಾವುದೇ ಸಮಸ್ಯೆ ಇರುವುದಿಲ್ಲ ಈ ಜಾಗದಲ್ಲಿ ಮತ್ತೆ ಕಾಮಗಾರಿ ನಡೆಸಲು ಗುತ್ತಿಗೆದಾರರು ಬಂದಿದ್ದು ಇದನ್ನು ಸ್ಥಗಿತಗೊಳಿಸಿ ಸರ್ಕಾರದ ದುಡ್ಡನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿನಂತಿಸಿದರು.
ಈ ಹಿಂದೆಯೇ ಚರಂಡಿ ಕಾಮಗಾರಿಯನ್ನು 15ನೇ ಹಣಕಾಸು ಯೋಜನೆ ಅಡಿಯಲ್ಲಿ ಅನುಮೋದನೆ ಗೊಂಡ ಕಾಮಗಾರಿಯನ್ನು ಸ್ಥಗಿತ ಗೊಳಿಸ, ಅದೇ ವಾರ್ಡಿನ ಅವಶ್ಯಕತೆ ಇರುವಲ್ಲಿ ಕಾಮಗಾರಿ ಕೈಗೊಳ್ಳುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು ಮತ್ತೆ ಅದೇ ಕಾಮಗಾರಿಯನ್ನು ಕೈಗೆತ್ತಿ ಕೊಂಡಿರುವುದು ಕಂಡನಿಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುಮಂಗಳಮ್ಮ, ರಮೇಶ, ರಾಮುರ್ತಿ, ವಿಜಯ್ ಕುಮಾರ್, ಪ್ರಕಾಶ್, ಪ್ರಶಾಂತ್ ಕುಮಾರ್, ಶರಣ ಬಸವ ಹಾಗೂ ಸಾರ್ವಜನಿಕರು ಇದ್ದರು.