ಚರಂಡಿ ಕಾಮಗಾರಿಗೆ ಚಾಲನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ.25- ನಗರದ ಸಂಗಂ ಟಾಕೀಸ್ ಬಳಿಯ ದರ್ಗಾದಿಂದ ರಾಘವೇಂದ್ರ ಟಾಕೀಸ್ ರಸ್ತೆ ವರೆಗೆ ಚರಂಡಿ ನಿರ್ಮಿಸುವ ಕಾಮಗಾರಿಗೆ ಇಂದು ಬೆಳಿಗ್ಗೆ ನಗರ ಶಾಸಕ ಗಾಲಿ ಶಾಸಕ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.
ಹದಿನೈದನೇ ಹಣಕಾಸು ಯೋಜನೆಯಡಿ ಇದನ್ನು ಕೈಗೊಳ್ಳಲಾಗಿದೆ. 
ಈ ಸಂದರ್ಭದಲ್ಲಿ15 ನೇ ವಾರ್ಡಿನ  ಬಿಜೆಪಿ ಮುಖಂಡರು ಮೀಡಿಯಾ ಸಂಚಾಲಕ ರಾಜೀವ, ಗೋಪಾಲ್,  ಬದ್ರಿ, ಕಾಂತ್, ರವೀಂದ್ರ ರೆಡ್ಡಿ, ಪಾಲಿಕೆ  ಸದಸ್ಯರಾದ  ಶ್ರೀನಿವಾಸ್ ಮೋತ್ಕರ್, ನೂರ್, ರಾಬಕ ಹಾಲು  ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ ಮೊದಲಾದವರು ಇದ್ದರು.