ಚರಂಡಿಗೆ ಬಿದ್ದು ಮಗು ಸಾವು

ಕಲಬುರಗಿ,ಆ.25-ಮನೆಯ ಮುಂದೆ ಆಟವಾಡುತ್ತಿದ್ದ ಮಗುವೊಂದು ಚರಂಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಗರದ ಹೊರವಲಯದ ಹಾಗರಗಾ ಪ್ರದೇಶದಲ್ಲಿನ ಮುಜಾಹಿರ್ ನಗರದ ಸಪ್ನಾ ಬೇಕರಿ ಹತ್ತಿರ ಸಂಭವಿಸಿದೆ. ಮೃತ ಮಗುವನ್ನು ಸೋನಿಯಾಗಾಂಧಿ ಕಾಲೋನಿಯ ಮೊಹ್ಮದ್ ಬುರಾಹನುದ್ದೀನ್ ಅವರ ಪುತ್ರ ಅಬ್ದುಲ್ ರಹಿಮಾನ್ (02) ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ ಆಟವಾಡುತ್ತಿದ್ದ ಮಗು ಮನೆಯ ಎದುರುಗಡೆ ಇದ್ದ ಚರಂಡಿಯಲ್ಲಿ ಬಿದ್ದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ವಿಶ್ವವಿದ್ಯಾಲಯ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಒಳಚರಂಡಿಗಳು ಸೂಕ್ತ ವ್ಯವಸ್ಥೆಯಿಲ್ಲದೇ ಇರುವುದರಿಂದ ಮಗುವಿನ ಸಾವು ಸಂಭವಿಸಿದೆ. ಕೂಡಲೇ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.