ಚನ್ನಾ ಮಸಾಲಾ ಮಾಡುವ ವಿಧಾನ

ಚನ್ನಾ ಮಸಾಲ ಉತ್ತರ ಭಾರತದ ಪ್ರಸಿದ್ಧ ರುಚಿಕರ ಮಸಾಲೆ ಖಾದ್ಯ. ಚಪಾತಿ, ರೋಟಿ, ಎಲ್ಲದರೊಂದಿಗೂ ಸುಲಭವಾಗಿ ಹೊಂದಿಕೆಯಾಗುವಂತಹ ಈ ಕಡಲೆಕಾಳಿನ ಖಾದ್ಯ ತಯಾರಿಸೋದು ಅಷ್ಟೇ ಸುಲಭ.

ಬೇಕಾಗುವ ಸಾಮಗ್ರಿಗಳು
೧ ಕಪ್ ಕಡಲೆಕಾಳು (ಒಂದು ರಾತ್ರಿಯಿಡೀ ನೆನೆಸಿರಬೇಕು)
೨ ಚಿಕ್ಕ ಈರುಳ್ಳಿ (ತುರಿದಿದ್ದು)
೨ ಟೊಮೆಟೊ (ಚಿಕ್ಕದಾಗಿ ಕತ್ತರಿಸಿರಬೇಕು)
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿರು ಮೆಣಸಿನಕಾಯಿ
ಚೆಕ್ಕೆ, ಲವಂಗ ಪುಡಿ
ಜೀರಿಗೆ, ಪಲಾವ್ ಎಲೆ
ಕೆಂಪು ಮೆಣಸಿನಕಾಯಿ ಪುಡಿ
ಅರಿಶಿನ, ಗರಂ ಮಸಾಲೆ, ಧನ್ಯಾ ಪುಡಿ
ಉಪ್ಪು, ಹುಣಸೆ, ಟೀ ಸೊಪ್ಪು
ಎಣ್ಣೆ
ಬೆಣ್ಣೆ, ಕೊತ್ತಂಬರಿ ಸೊಪ್ಪು

ಮಾಡುವುದು ಹೀಗೆ:

  • * ನೆನೆಸಿದ ಕಡಲೆಕಾಳು, ನೀರು ಮತ್ತು ತೆಳುವಾದ ಬಟ್ಟೆಯಲ್ಲಿ ಟೀ ಪುಡಿ ಅಥವಾ ಟೀಸೊಪ್ಪನ್ನು ಕಟ್ಟಿ ಸ್ವಲ್ಪ ಉಪ್ಪು ಬೆರೆಸಿ ಕುಕ್ಕರಿನಲ್ಲಿ ೩-೪ ಬಾರಿ ಕೂಗುವವರೆಗೂ ಬೇಯಿಸಬೇಕು. (ಟೀ ಬ್ಯಾಗ್ ಕೂಡ ಉಪಯೋಗಿಸಬಹುದು)
  • * ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಹುರಿಯಬೇಕು. ಕೆಲವು ಸೆಕೆಂಡ್ ಗಳ ನಂತರ ಈರುಳ್ಳಿ ಹಾಕಿ ಅದು ಕೆಂಬಣ್ಣಕ್ಕೆ ತಿರುಗುತ್ತಿದ್ದಂತೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಮೆಣಸಿನ ಕಾಯಿ ಹಾಕಬೇಕು.
  • * ನಂತರ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಚೆಕ್ಕೆ ಲವಂಗದ ಪುಡಿ, ಧನ್ಯಾ ಪುಡಿ ಹಾಕಿ ಟೊಮೆಟೊ ಬೆರೆಸಬೇಕು.
  • * ಈಗ ಸ್ವಲ್ಪ ಹುರಿದು ಗರಂ ಮಸಾಲ, ಕೆಂಪು ಮೆಣಸಿನ ಕಾಯಿ ಪುಡಿ ಮತ್ತು ಕುಕ್ಕರ್ ನಲ್ಲಿ ಬೇಯಿಸಿದ ನೀರನ್ನು ಸ್ವಲ್ಪ ಹಾಕಬೇಕು.
  • * ಇದರೊಳಗೆ ಬೇಯಿಸಿದ ಕಡಲೆಕಾಳನ್ನು ಹಾಕಿ ಬೇಯಲು ಬಿಡಬೇಕು. ಒಂದು ಚಿಕ್ಕ ಬಟ್ಟಲಿನಲ್ಲಿ ಸ್ವಲ್ಪ ನೀರು, ಸಕ್ಕರೆ ಮತ್ತು ಹುಣಸೆಹಣ್ಣನ್ನು ಹಾಕಿ ನೆನೆಸಬೇಕು.
  • * ಕಡಲೆಕಾಳು ಗಟ್ಟಿಯಾಗುತ್ತಿದ್ದಂತೆ ಹುಣಸೆ ಹಣ್ಣನ್ನು ಹಿಂಡಿ ರಸವನ್ನು ಸೇರಿಸಬೇಕು.
  • * ಕೊನೆಗೆ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಮತ್ತು ಬೆಣ್ಣೆಯನ್ನು ಹಾಕಿದರೆ ಸಖತ್ತಾದ ಚೆನ್ನಾ ಮಸಾಲದ ರುಚಿಯನ್ನು ನೀವು ಮನಸ್ಸಾರೆ ಸವಿಯಬಹುದು.