ಚನ್ನವೀರ ಶಿವಯೋಗಿಗಳ 37ನೇ ಪುಣ್ಯಸ್ಮರಣೋತ್ಸವ

ಕಲಬುರಗಿ,ಡಿ.4-ತಾಲ್ಲೂಕಿನ ಗಣಜಲಖೇಡ ಗ್ರಾಮದಲ್ಲಿ ತ್ರಿವಿಧ ದಾಸೋಹಮೂರ್ತಿ, ಭೀಷ್ಮ ಬ್ರಹ್ಮಚಾರಿ ಲಿಂಗೈಕ್ಯ ಗುರು ಚನ್ನವೀರ ಮಹಾಶಿವಯೋಗಿಗಳವರ 37 ನೇ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು.
ಶ್ರೀಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸೊನ್ನಲಗಿ ಸಿದ್ಧರಾಮೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಗಣಜಲಖೇಡ ಮೌನೇಶ್ವರ ದೇವಸ್ಥಾನದ ನಾಗೇಶ್ ಮುತ್ಯಾ ಅವರು ಉದ್ಘಾಟಿಸಿದರು.
ಹನ್ನೊಂದು ದಿನ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪುರಾಣಿಕರಾದ ಅಬ್ಬೆತುಮಕೂರಿನ ತೋಂಟೇಂದ್ರ ಶಾಸ್ತ್ರಿಗಳು ನಡೆಸಿಕೊಡುತ್ತಿರುವರು. ಜೊತೆಗೆ ಗಾಯಕರಾದ ಭರಮಶೆಟ್ಟಿ ಪಾಟೀಲ್ ತಡಕಲ್ ಹಾಗೂ ತಬಲಾ ವಾದಕರಾದ ಅನಿಲ್ ಕುಮಾರ್ ಮಠಪತಿ ಸಂಗೀತ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಚನ್ನವೀರ ಚಕ್ಕಿ, ಶರಣಯ್ಯ ಸ್ವಾಮಿ ಮಠ, ಶ್ರೀಧರ್ ಪಾಟೀಲ್, ಶರಣಬಸಪ್ಪ ಗಿರೆಗೂ¼, ಮಲ್ಲಿಕಾರ್ಜುನ ನಾಟಿಕಾರ್, ಯಲ್ಲಾಲಿಂಗ ಮಹಾಗಾಂವ್, ಚನ್ನವೀರ ತೊನಸಳ್ಳಿ, ಗುರುಶಾಂತಪ್ಪ ತೊನಸಳ್ಳಿ ಮತ್ತು ಗ್ರಾಮದ ಅನೇಕ ಸದ್ಭಕ್ತರು ಭಾಗವಹಿಸಿದ್ದರು.