ಚನ್ನಮ್ಮ, ರಾಯಣ್ಣನಂಥವರನ್ನು ಪಡೆದಿದ್ದು ನಮ್ಮೆಲ್ಲರ ಪುಣ್ಯ

ಚನ್ನಮ್ಮನ ಕಿತ್ತೂರ,ಆ17: ವೀರರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಂತಹ ಮಹನೀಯರನ್ನು ಪಡೆದಿದ್ದು. ನಮ್ಮ ನಿಮ್ಮೇಲ್ಲರ ಪುಣ್ಯ ಎಂದು ತಹಸೀಲ್ದಾರ ಪ್ರಭಾಕರ ಗಾಯಕವಾಡ ಹೇಳಿದರು. ಸಮೀಪದ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ರಾಯಣ್ಣನಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ದಿನದಂದು ರಾಯಣ್ಣನ ಜನ್ಮೋತ್ಸವ ಆಚರಿಸುವುದು ನಮ್ಮೆಲ್ಲರ ಭಾಗ್ಯ, ಬ್ರಿಟಿಷರನ್ನು ಹೊಡೆದೊಡಿಸಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅದಕ್ಕಾಗಿ ಇಂದು ನಾವು ಎಲ್ಲ ಮಹನೀಯರನ್ನು ಸ್ಮರಿಸಬೇಕಾಗಿದೆ. ಆದ್ದರಿಂದ ನಾಡಿನ ಮೂಲೆ-ಮೂಲೆಗಳಿಂದ ಸಹಸ್ರಾರು ಜನ ನಂದಗಡಕ್ಕೆ ಆಗಮಿಸಿ ರಾಯಣ್ಣನ ಸಮಾಧಿಗೆ ಗೌರವ ಸಮರ್ಪಿಸುತ್ತಾರೆಂದರು.
ಅಧ್ಯಕ್ಷ ಸ್ಥಾನ ವಹಿಸಿಕೊಂಡು ಪ್ರಾಸ್ತಾವಿಕವಾಗಿ ರಾಯಣ್ಣನ ಚರಿತ್ರೆ ಕುರಿತು ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಮಾತನಾಡಿದರು.
ಈ ಸಮಯದಲ್ಲಿ ಕ್ರಾಂತ್ರಿವೀರ ಸಂಗೋಳ್ಳಿ ರಾಯಣ್ಣ ಸಮೀತಿ ನಂದಗಡ ಕರ್ನಾಟಕ ಗಡಿನಾಡು ಹಿತ ರಕ್ಷಣಾ ವೇದಿಕೆ ಮತ್ತು ವಿವಿಧ ಸಂಘಟನೆಗಳಿಂದ ಕಾರ್ಯಕ್ರಮ ಜರುಗಿದವು. ನಂತರ ಪೋಲಿಸ್ ಇಲಾಖೆಯವರನ್ನು ಗಡಿನಾಡು ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ವೇದಿಕೆ ಅಧ್ಯಕ್ಷ ಶಂಕರ ಸೋನಾಲಿ, ಬಾಬು ಮೂಲಿಮನಿ, ಬಸವರಾಜ ಭಂಗಿ, ಎಂ.ಎಂ. ರಾಜೀಬಾಯಿ, ಪತ್ರಕರ್ತ ಕಲ್ಲಪ್ಪ ಅಗಸಿಮನಿ ಈರಯ್ಯಾ ಹಿರೇಮಠ, ಉಳವೇಶ ಎಮ್ಮಿ, ಮುಂತಾದವರಿದ್ದರು.